Thursday, October 8, 2026

BDA Apartments

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯೇ ಕರೆಕ್ಟ್: ನಟ ಜಗ್ಗೇಶ್ BDA JK_Adv BDA Adv
Home Crime ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿ ದಾಳಿ….

ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿ ದಾಳಿ….

ಮೈಸೂರು,ಜೂ,25,2019(www.justkannada.in): ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ ಎರಡು ಮಕ್ಕಳಿಗೆ ತೀವ್ರ ಸ್ವರೂಪದ ಗಾಯವಾಗಿರುವ ಘಟನೆ ಹೆಚ್.ಡಿ ಕೋಟೆಯಲ್ಲಿ ನಡೆದಿದೆ.

ಎಚ್.ಡಿ.ಕೋಟೆ ಪಟ್ಟಣದ ಶಿವಾಜಿ ರಸ್ತೆಯಲ್ಲಿ ಘಟನೆಯಲ್ಲಿ ಈ ಘಟನೆ ನಡೆದಿದೆ. ಯಶ್ವಂತ್ (2) ಮತ್ತು ರಜೈನ್ ಖಾನ್ (3)ನಾಯಿ ದಾಳಿಯಿಂದ ಗಾಯಗೊಂಡ ಪುಟಾಣಿ ಮಕ್ಕಳು. ಇಬ್ಬರು ಮಕ್ಕಳು ಆಟವಾಡುತ್ತಿದ್ದ ವೇಳೆ ನಾಯಿ ದಾಳಿ ನಡೆಸಿದ್ದು ನಾಯಿ ದಾಳಿಯಿಂದ ಕಣ್ಣು ಮೂಗು ಕಿವಿ ಗಲ್ಲದ ಭಾಗದಲ್ಲಿ ತೀವ್ರಸ್ವರೂಪದ ಗಾಯವಾಗಿದೆ.

ಗಾಯಗೊಂಡ ಮಕ್ಕಳ್ಳಿಗೆ ಹೆಚ್  ಡಿ ಕೋಟೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಶಿವಾಜಿ ರಸ್ತೆಯಲ್ಲಿ ಅಕ್ರಮವಾಗಿ ದನ ಕತ್ತರಿಸಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ಮಾಂಸದ ರುಚಿಗೆ ಬರುವ ನಾಯಿಯಿಂದ ಮಕ್ಕಳ ಮೇಲೆ ದಾಳಿ  ನಡೆಸಿವೆ ಎಂದು ಆರೋಪಿಸಲಾಗಿದೆ.

Key words: Street dog-attack –children- playing-hd kote