ಕೋಲಾರದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ : ರೈತ ಮಹಿಳೆಯ ಪ್ರಗತಿಪರ ಮಾದರಿ ಕೃಷಿಯನ್ನ ಶ್ಲಾಘಿಸಿದ  ಸಚಿವ ಬಿ.ಸಿ.ಪಾಟೀಲ್

ಕೋಲಾರ, ಜನವರಿ 6,2021(www.justkannada.in):  ರೈತರಿಗೆ ಮನೋಸ್ಥೈರ್ಯ ತುಂಬುವ ಸಲುವಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕೋಲಾರದಲ್ಲಿ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.one-day-program-farmers-kolar-agriculture-minister-bc-patel

ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನ ಕೋಲಾರ ಉಸ್ತುವಾರಿ ಸಚಿವರೂ ಆಗಿರುವ ಅಬಕಾರಿ ಸಚಿವ ನಾಗೇಶ್ ಸ್ವಾಗತಿಸಿದರು.

ಕೋಲಾರ ಬಿಜೆಪಿ ವತಿಯಿಂದ ಸಚಿವ ಬಿ.ಸಿ.ಪಾಟೀಲ್ ಸನ್ಮಾನ ಮಾಡಲಾಯಿತು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿಎಂ ಕೃಷ್ಣಮೂರ್ತಿ ಕೋರ್ ಕಮಿಟಿ ಸದಸ್ಯ ಎಂ.ಕೆ.ವಾಸುದೇವ, ಓಬಿಸಿ ಅಧ್ಯಕ್ಷ ಕೋಳಿ ನಾಗರಾಜ ಮತ್ತಿತರರು ಸನ್ಮಾನಿಸಿದರು.one-day-program-farmers-kolar-agriculture-minister-bc-patel

ಕೋಲಾರದಲ್ಲಿ ರಾಗಿಕಣಕ್ಕೆ ಪೂಜೆ ಸಲ್ಲಿಸುವ ಮೂಲಕ ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನ ಸಚಿವ ನಾಗೇಶ್, ಕೃಷಿ ಸಚಿವ ಬಿ.ಸಿ.ಪಾಟೀಲ್  ಉದ್ಘಾಟಿಸಿದರು.  ಬಳಿಕ ಸಚಿವ ಬಿ.ಸಿ ಪಾಟೀಲ್ ಅವರು ಪ್ರಗತಿಪರ ಕೃಷಿಕ ಮಹಿಳೆ ಅಶ್ವತ್ಥಮ್ಮ ಅವರ ತಾಕಿಗೆ ಭೇಟಿ ನೀಡಿದರು. ಈ ವೇಳೆ ಅಶ್ವತ್ಥಮ್ಮ ಅವರ ಪ್ರಗತಿಪರ ಮಾದರಿ ಕೃಷಿಯನ್ನು ಸಚಿವ ಬಿ.ಸಿ.ಪಾಟೀಲ್ ಶ್ಲಾಘಿಸಿದರು.  ಅಜೋಲಾ ತೊಟ್ಟಿ ವೀಕ್ಷಿಸಿದ ಸಚಿವ ಬಿಸಿ ಪಾಟೀಲ್  ನಂತರ ಚಾಪ್ ಕಟರ್‌ನಿಂದ ಹುಲ್ಲನ್ನು ಕತ್ತರಿಸಿದರು.

ಇದೇ ವೇಳೆ  ಸಚಿವ ಬಿ.ಸಿ.ಪಾಟೀಲ್ ಹಸುವಿನ ಹಾಲು ಕರೆದು ಗಮನ ಸೆಳೆದರು.

Key words: one-day – Program-farmers –Kolar-agriculture minister-BC Patel