Monday, August 3, 2026

BDA Apartments

Home Crime ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನನ್ನು ಬಂಧಿನ…!

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನನ್ನು ಬಂಧಿನ…!

ಬೆಂಗಳೂರು,ಡಿಸೆಂಬರ್,27,2020(www.justkannada.in) : ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕ್ರಿಮಿನಲ್, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರನನ್ನು ಬಂಧಿಸಲಾಗಿದೆ.Teachers,solve,problems,Government,bound,Minister,R.Ashokಗುಜರಾತ್ ಎಟಿಎಸ್ ತಂಡದವರಿಂದ ದಾವೂದ್ ಸಹಚರನಾದ ಅಬ್ದುಲ್ ಮಜೀದ್ ಕುಟ್ಟಿಯ ಬಂಧನವಾಗಿದೆ. ಕಳೆದ 24 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಬ್ದುಲ್ ಮಜೀದ್ ಕುಟ್ಟಿ, ಇಂದು ಜಾರ್ಖಂಡ್ ನಲ್ಲಿ ಭಯೋತ್ಪದನಾ ನಿಗ್ರಹ ದಳ(ATS) ಬಲೆಗೆ ಬಿದ್ದಿದ್ದಾನೆ.

ಶಸ್ತ್ರಾಸ್ತ್ರಗಳ ಡೀಲಿಂಗ್ ಪ್ರಕರಣದಲ್ಲಿ ಮಜೀದ್ ಸಿಕಿಬಿದ್ದಿದ್ದು ಈಗ ಎಟಿಎಸ್ ವಶದಲ್ಲಿದ್ದಾನೆ. ಅಬ್ದುಲ್ ಮಜೀದ್ ಕುಟ್ಟಿ ಕೇರಳ ಮೂಲದವನಾಗಿದ್ದು, 1996ರ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡಿದ್ದ 106 ಪಿಸ್ತೂಲ್, 750 ಸಿಡಿಮದ್ದುಗಳು ಮತ್ತು 4 ಕೆ.ಜಿ.RDX ಸಂಗ್ರಹಿಸಿದ ಆರೋಪ ಎದುರಿಸುತ್ತಿದ್ದ ಎಂದು ತಿಳಿದು ಬಂದಿದೆ.Underworld-don-Dawood-Ibrahim's-companion-arrested

ಪ್ರಕರಣದ ಉಳಿದ ಆರೋಪಿಗಳನ್ನು 1996ರಲ್ಲೇ ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ಅಬ್ದುಲ್ ಮಜೀದ್ ಕುಟ್ಟಿ ಹೆಸರು ಮುನ್ನೆಲೆಗೆ ಬಂದಿತ್ತು. ಆದರೆ, ಆ ಬಳಿಕ ಮಜೀದ್ ತಲೆಮರೆಸಿಕೊಂಡಿದ್ದ. ಬಂದಿತ ಆರೋಪಿಯನ್ನು ಸದ್ಯ ಕೊವಿಡ್ ಪರೀಕ್ಷೆಯ ಬಳಿಕ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಎಟಿಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

key words : Underworld-don-Dawood-Ibrahim’s-companion-arrested