ಭಾರತೀಯ ಸೇನೆ ಮೋದಿ ಅವರ ವೈಯಕ್ತಿಕ ಆಸ್ತಿ ಅಲ್ಲ: ಭ್ರಷ್ಟಾಚಾರದ ಬಗ್ಗೆ ಚರ್ಚೆಗೆ ಬನ್ನಿ: ರಾಹುಲ್ ಗಾಂಧಿ ಸವಾಲು..

ನವದೆಹಲಿ,ಮೇ,4,2019(www.justkannada.in):  ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ನಮ್ಮ ಭಾರತೀಯ ಸೇನೆ. ಭಾರತೀಯ ಸೇನೆ ಮೋದಿ ಅವರ ವೈಯಕ್ತಿಕ ಆಸ್ತಿಯಲ್ಲ. ನಮ್ಮ ಸರ್ಕಾರದಲ್ಲೂ ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ರಫೆಲ್ ಡೀಲ್ ನಲ್ಲಿ 30 ಸಾವಿರ ಕೋಟಿ ಲೂಟಿ ಹೊಡೆದಿದ್ದಾರೆ. ಹೀಗಾಗಿ ಭ್ರಷ್ಟಾಚಾರದ ಬಗ್ಗೆ ಮೋದಿ ಅವರು 10ರಿಂದ 15 ನಿಮಿಷಗಳ ಕಾಲ ನನ್ನ ಜತೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಚೌಕೀದಾರ ಕಳ್ಳ ಎಂದಿದ್ದಕ್ಕಾಗಿ ನಾನೇನೂ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯಲ್ಲಿ ಕ್ಷಮೆ ಯಾಚಿಸಿಲ್ಲ. ಸುಪ್ರೀಂಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.  ಸುಪ್ರೀಂ ಕೋರ್ಟ್ ಈ ಮಾತನ್ನು ಹೇಳಿದೆ ಎಂದಿದ್ದಕ್ಕಾಗಿ ಮಾತ್ರವೇ ನಾವು ನ್ಯಾಯಾಲಯದ ಕ್ಷಮೆ ಯಾಚಿಸಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ನರೇಂದ್ರ ಮೋದಿ ದೇಶದ ಆರ್ಥಿಕತೆಯನ್ನೇ ಹಾಳುಗೆಡಹಿದ್ದಾರೆ. ದೇಶದ ಆರ್ಥಿಕತೆಯನ್ನ ಬುಡಮೇಲು ಮಾಡಿದ್ದಾರೆ. ನ್ಯಾಯ ಯೋಜನೆ ಭಾರತದ ಆರ್ಥಿಕತೆ ಮೇಲ ಪರಿಣಾಮ ಬೀರಲ್ಲ ಅಂತಾರೆ. ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಮ್ಮ ಸಾಧನೆ ಅಂತಿದ್ದಾರೆ. ದೇಶದ ಜನರು ಉದ್ಯೋಗ ಸೃಷ್ಠಿ ಎಲ್ಲಿ ಎಂದು ಮೋದಿ ಅವರನ್ನ ಪ್ರಶ್ನಿಸುತ್ತಿದ್ದಾರೆ. ಉದ್ಯೋಹ ಸೃಷ್ಟಿಗೆ ಮೋದಿ ಬಳಿ ಯೋಜನೆಗಳೇ ಇಲ್ಲ  ಈ ಬಗೆಗಾಗಲೀ ಅಥವಾ ರೈತರ ಬಗೆಗಾಗಲೀ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.

ಮೋದಿ ಮತ್ತು ಬಿಜೆಪಿ ಸೋಲು ಖಚಿತ. ಇದುವರೆಗಿನ ಮತದಾನದಲ್ಲಿ ಮೋದಿ ಅವರ ಸೋಲು ಖಚಿತ ಎಂದು ರಾಹುಲ್ ಗಾಂಧಿ ಭವಿಷ್ಯ ನುಡಿದರು.

 ಚುನಾವಣಾ ಆಯೋಗದ ಮೇಲೂ ಗರಂ…

ಹಾಗೆಯೇ ಇದೇ ವೇಳೆ ಕೇಂದ್ರ ಚುನಾವಣಾ ಆಯೋಗದ ವಿರುದ್ದವೂ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್ ಗಾಂಧಿ,  ಚುನಾವಣಾ ಆಯೋಗ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ. ಅಡಳಿತ ಮತ್ತು ವಿಪಕ್ಷಗಳ ಮೇಲೆ  ಪಕ್ಷಪಾತ ಧೋರಣೆ ನಡೆಸುತ್ತಿದೆ.  ಸಾಂವಿಧಾನಿಕ ಸಂಸ್ಥೆ ತನ್ನ ಜವಾಬ್ದಾರಿಯನ್ನ ನಿರ್ವಹಿಸಲಿ ಎಂದು ಸಲಹೆ ನೀಡಿದರು.

Key words:Indian Army – not- Modi- personal- property-  Rahul Gandh- challenge