Tuesday, October 6, 2026

BDA Apartments

ಮಕ್ಕಳ ಸಾಹಿತ್ಯಕ್ಕೆ ಹೊಸ ಆಯಾಮದ ಅಗತ್ಯವಿದೆ- ಎಲ್. ಎನ್. ಮುಕುಂದರಾಜ್ BDA JK_Adv BDA Adv
Home Front Page ಅದಷ್ಟು ಬೇಗ ಬಿಎಸ್ ಯಡಿಯೂರಪ್ಪ ಸಿಎಂ ಆಗ್ತಾರೆ- ಬಿಜೆಪಿ ಶಾಸಕ ಆರ್. ಅಶೋಕ್

ಅದಷ್ಟು ಬೇಗ ಬಿಎಸ್ ಯಡಿಯೂರಪ್ಪ ಸಿಎಂ ಆಗ್ತಾರೆ- ಬಿಜೆಪಿ ಶಾಸಕ ಆರ್. ಅಶೋಕ್

ಕೋಲಾರ,ಜೂ,22,2019(www.justkannada.in): ಮೈತ್ರಿ ಸರ್ಕಾರ ಪತನವಾದರೆ ಒಳ್ಳೆಯದು. ಬಿಎಸ್ ಯಡಿಯೂರಪ್ಪ ಆದಷ್ಟು ಬೇಗ ಸಿಎಂ ಆಗ್ತಾರೆ ಎಂದು ಬಿಜೆಪಿ ಶಾಸಕ ಆರ್,ಅಶೋಕ್ ಭವಿಷ್ಯ ನುಡಿದರು.

ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಆರ್. ಅಶೋಕ್, ಮೈತ್ರಿ ಸರ್ಕಾರ ಒಡೆದ ಮನೆಯಾಗಿದೆ. ಯಾವಾಗ ಏನ್ ಆಗುತ್ತೋ ಹೇಳೋಕೆ ಆಗೋದಿಲ್ಲ.  ಬಿಎಸ್ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು.

ಸರ್ಕಾರದ ವೈಪಲ್ಯಗಳನ್ನ ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ. ಅದು ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಮಾಡಿರುವ ತಂತ್ರವಷ್ಟೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಮೈತ್ರಿ ಸರ್ಕಾರದಲ್ಲಿ ಪರಸ್ಪರ ಕಿತ್ತಾಡೋದೆ ಆಗಿದೆ ಎಂದು ಕಿಡಿಕಾರಿದರು.

ಇನ್ನು ಕಾಂಗ್ರೆಸ್  ಸ್ಥಿತಿ ಪಿಶಾಚಿಯಂತಾಗಿದೆ. ಅತ್ತ ಸೂಕ್ತನಾಯಕನು ಇಲ್ಲ. ಸೂಕ್ತ ನೆಲೆಯೂ ಇಲ್ಲ  ಎಂದು ಲೇವಡಿ ಮಾಡಿದರು.

Key words: BS Yeddyurappa -CM –again- BJP MLA -R. Ashok.