Sunday, August 16, 2026

BDA Apartments

Home Crime ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಸಜಾ ಶಿಕ್ಷೆಯಲ್ಲಿದ್ದ  ಖೈದಿ ಸಾವು…

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಸಜಾ ಶಿಕ್ಷೆಯಲ್ಲಿದ್ದ  ಖೈದಿ ಸಾವು…

ಮೈಸೂರು,ಜೂ,22,2019(www.justkannada.in): ಮೈಸೂರಿನ ಕೇಂದ್ರ ಕಾರಗೃಹದಲ್ಲಿ ಸಜಾ ಶಿಕ್ಷೆ ಅನುಭವಿಸುತ್ತಿದ್ದ ಖೈದಿಯೊಬ್ಬ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಮೈಸೂರಿನ ಕೇಂದ್ರ ಕಾರಾಗೃಹ ವಾಸಿ ವಿಶ್ವನಾಥ್ (40) ಸಾವನ್ನಪ್ಪಿದ ಕೈದಿ. ಕೈದಿ ವಿಶ್ವನಾಥ್ ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿದ್ದು, ಚೆಕ್ ಬೌನ್ಸ್ ಕೇಸ್ ಸಾಬೀತಾದ ಹಿನ್ನಲೆ ಸಜಾ ಅನುಭವಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಕೇಂದ್ರ ಕಾರಗೃಹದ ಸಜಾ ಖೈದಿಯಾಗಿದ್ದ ವಿಶ್ವನಾಥ್ ಗೆ ಅನಾರೋಗ್ಯವಿತ್ತು. ಈ ಹಿನ್ನೆಲೆ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ವಿಶ್ವನಾಥ್ ಸಾವನ್ನಪ್ಪಿದ್ದು ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words: Death – prisoner – Central Prison – Mysore