Wednesday, September 30, 2026

BDA Apartments

ಗ್ರಾಪಂ ಪೂರ್ವಭಾವಿ ಸಭೆಗೆ ಚಕ್ಕರ್ ನಾಟಕಕ್ಕೆ ಹಾಜರಾದ ಶಾಸಕ ಜಿ.ಟಿ.ದೇವೇಗೌಡ BD...
Home Front Page ಗ್ರಾಪಂ ಪೂರ್ವಭಾವಿ ಸಭೆಗೆ ಚಕ್ಕರ್ ನಾಟಕಕ್ಕೆ ಹಾಜರಾದ ಶಾಸಕ ಜಿ.ಟಿ.ದೇವೇಗೌಡ

ಗ್ರಾಪಂ ಪೂರ್ವಭಾವಿ ಸಭೆಗೆ ಚಕ್ಕರ್ ನಾಟಕಕ್ಕೆ ಹಾಜರಾದ ಶಾಸಕ ಜಿ.ಟಿ.ದೇವೇಗೌಡ

ಮೈಸೂರು,ಡಿಸೆಂಬರ್,13,2020(www.justkannada.in) : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗ್ರಾಮಪಂಚಾಯಿತಿ ಚುನಾವಣೆ ಕಾರ್ಯಕರ್ತರ ಪೂರ್ವಭಾವಿ ಸಭೆಗೆ ಹಾಜರಾಗದೇ, ಶಾಸಕ ಜಿ.ಟಿ.ದೇವೇಗೌಡ ನಾಟಕ ಸಂಘದ ಉದ್ಘಾಟನೆಗೆ ಹಾಜರ್.

logo-justkannada-mysore

ಆಂದೋಲನ ವೃತ್ತದ ಅಮ್ಮಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗ್ರಾಮಪಂಚಾಯಿತಿ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸದೇ, ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಪೌರಾಣಿಕ ರಂಗಭೂಮಿ ನಿರ್ದೇಶಕರು, ವಾದ್ಯವೃಂದದವರು ಹಾಗೂ ಹರಿಕಥಾ ಕೀರ್ತನಕಾರರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕರ್ಣನ ಪ್ರಸಂಗ ಹಾಡಿದ ಜಿ.ಟಿ.ದೇವೇಗೌಡ

ದಾನಶೂರ ಕರ್ಣ ನಾಟಕ ನೋಡಲು ಬಂದ ಜಿಟಿಡಿಯವರು ವೇದಿಕೆ ಮೇಲೆ ಕರ್ಣನಾದರು.  ನಾಟಕದ ಕರ್ಣನ ಪ್ರಸಂಗವನ್ನು ಕಂಚಿನ ಕಂಠದಿ ಸುಶ್ರಾವ್ಯವಾಗಿ ಹಾಡಿದರು. ಕುಂತಿ ಕರ್ಣನ ಮಾತಕತೆಯನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿದರು.

ಜಿ.ಟಿ.ಡಿ ಅವರ ಹಾಡಿನ ಧಾಟಿ ಕಂಡು ದಂಗಾದ ಸಭಿಕರು, ಹಾಡಿಗೆ ಶಿಳ್ಳೆ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.

Those-without-political-maturity-government-shakes-falls-MLA-G.T.DeveGowda

key words : Grapham-preliminary-meeting-Chucker-MLA G.T.DeveGowda-attended-drama