Wednesday, August 12, 2026

BDA Apartments

Home Front Page ವೆಸ್ಟರ್ನ್  ಹೋಟೆಲ್ ತಾಜ್ ನಲ್ಲಿ ಕುಳಿತು ಅಧಿಕಾರ ನಡೆಸುತ್ತಿದ್ರು- ಹೆಚ್.ಡಿಕೆ ಆರೋಪಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ...

ವೆಸ್ಟರ್ನ್  ಹೋಟೆಲ್ ತಾಜ್ ನಲ್ಲಿ ಕುಳಿತು ಅಧಿಕಾರ ನಡೆಸುತ್ತಿದ್ರು- ಹೆಚ್.ಡಿಕೆ ಆರೋಪಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು…

ಬೆಳಗಾವಿ,ಡಿಸೆಂಬರ್,5,2020(www.justkannada.in):  ಪ್ರೀಪ್ಲಾನ್ ಮಾಡಿ ಸಿದ್ದರಾಮಯ್ಯ ಅಂಡ್ ಟೀಂ ನನ್ನ ಹೆಸರು ಹಾಳು ಮಾಡಿದರು ಎಂದು ಮೈಸೂರಿನಲ್ಲಿ ಆರೋಪಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.logo-justkannada-mysore

ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಸುಳ್ಳು ಹೇಳುವುದರಲ್ಲಿ ಹೆಚ್.ಡಿ ಕುಮಾರಸ್ವಾಮಿ ನಿಸ್ಸಿಮ. ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ. ಕಣ್ಣೀರು ಹಾಕೋದೆ ಅವರ ಕುಟುಂಬದ ಸಂಸ್ಕೃತಿ. ಒಲೈಕೆಗೂ ಮತ್ತು ಇನ್ಯಾರನ್ನೋ ನಂಬಿಸಲು ಕಣ್ಣೀರು ಹಾಕುತ್ತಾರೆ ಎಂದು ಟೀಕಿಸಿದರು.

ಹೆಚ್.ಡಿ ಕುಮಾರಸ್ವಾಮಿ ವೆಸ್ಟರ್ನ್  ಹೋಟೆಲ್ ತಾಜ್ ನಲ್ಲಿ ಕುಳಿತು ಅಧಿಕಾರ ನಡೆಸುತ್ತಿದ್ರು. ಇವರು ವೆಸ್ಟರ್ನ್ ಹೊಟೆಲ್ ನಿಂದ ಆಡಳಿತ ನಡೆಸಿದ್ದರು. ಇವರ ಕೇಂದ್ರ ಸ್ಥಾನ ತಾಜ್ ವೆಸ್ಟಂಡ್  ಹೊಟೇಲ್ ಆಗಿತ್ತು. ಶಾಸಕರ ಕಷ್ಟ ಸುಖ ಕೇಳಲಿಲ್ಲ. ಶಾಸಕರಿಗೆ ಹೆಚ್.ಡಿ ಕುಮಾರಸ್ವಾಮಿ ಸಹಕಾರ ನೀಡದೇ ಇದ್ದುದ್ದರಿಂದ ಸಮ್ಮಿಶ್ರ ಸರ್ಕಾರ ಬಿತ್ತು. ನಮ್ಮ ಶಾಸಕರಿಂದಲೇ ಅವರು ಸಿಎಂ ಆಗಿದ್ದು ಎಂದುಗುಡುಗಿದರು.

ಹೆಚ್.ಡಿ ದೇವೇಗೌಡ ಯಾರನ್ನೂ ಬೆಳೆಸಲ್ಲ. ತಮ್ಮ ಕುಟುಂಬದವರನ್ನ ಮಾತ್ರ ಬೆಳೆಸುತ್ತಾರೆ ಎಂದು ಸಿದ್ಧರಾಮಯ್ಯ ಆರೋಪಿಸಿದರು.

Key words: Western Hotel Taj- Former CM- Siddaramaiah – accusation-hd kumaraswamy