ಬೆಂಗಳೂರು,ಡಿಸೆಂಬರ್,4,2020(www.justkannada.in):  ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಬಂದ್ ಮಾಡದಂತೆ ಕನ್ನಡ ಪರ ಸಂಘಟನೆಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ನಾಳಿನ ಬಂದ್ ಕುರಿತು ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ, ನಾಳೆ ಬಂದ್ ಗೆ ಯಾವುದೇ ರೀತಿ ಅವಕಾಶ ಕೊಡಬೇಡಿ. ವಾಟಾಳ್ ನಾಗರಾಜ್ ಬಂದ್ ಮಾಡುವ ಅವಶ್ಯಕತೆ ಇಲ್ಲ. ಬಂದ್ ಮಾಡಿ ಜನರಿಗೆ ತೊಂದರೆ ಕೊಡುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು. 
ನಮ್ಮ ಸರ್ಕಾರ ಕನ್ನಡ ಅಭಿವೃದ್ಧಿಗೆ ಬದ್ಧವಾಗಿದೆ. ಈಗಾಗಲೇ ಕನ್ನಡಕ್ಕೆ ಬೇಕಾದ ಆದ್ಯತೆ ಕೊಟ್ಟಿದ್ದೇನೆ. ಇನ್ನು ಹೆಚ್ಚಿನ ಆದ್ಯತೆ ಕೊಡಲು ನಾವು ಸಿದ್ಧರಿದ್ಧೇವೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
Key words: Don’t –bandh- tomorrow-CM BS yeddyurappa-appeals – Kannada organizations.
 
            