ಲಾರಿಗೆ ಆ್ಯಂಬುಲೆನ್ಸ್ ಡಿಕ್ಕಿ:  ಸ್ಟಾಫ್ ನರ್ಸ್ ಸ್ಥಳದಲ್ಲೇ ಸಾವು….

ರಾಯಚೂರು,ಡಿಸೆಂಬರ್,4,2020(www.justkannada.in):  ನಿಂತಿದ್ಧ ಲಾರಿಗೆ  ಆಂಬ್ಯುಲೆನ್ಸ್ ಡಿಕ್ಕಿಯಾಗಿ ಸ್ಟಾಫ್ ನರ್ಸ್ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.logo-justkannada-mysore

ಸ್ಟಾಪ್​ ನರ್ಸ್​ ಸಂಗಮೇಶ್​ (30) ಮೃತಪಟ್ಟವರು. ಚಾಲಕ ಹನುಮಪ್ಪನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ. ಲಿಂಗಸುಗೂರು ತಾಲೂಕಿನ ಪಾಮನಕಲ್ಲೂರಿನಿಂದ ರಾಯಚೂರಿನ ರೀಮ್ಸ್​ ಆಸ್ಪತ್ರೆಗೆ ಗರ್ಭಿಣಿಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆತರಬೇಕಿತ್ತು. ಆಂಬ್ಯುಲೆನ್ಸ್ ನಲ್ಲಿ ಸ್ಟಾಪ್​ ನರ್ಸ್​ ಸಂಗಮೇಶ್​ (30)ನೊಂದಿಗೆ ಚಾಲಕ ಹನುಮಪ್ಪ ಹೊರಟಿದ್ದು,  ಈ ವೇಳೆ  ಅಂಬ್ಯಲೆನ್ಸ್ ಲಿಂಗಸಗೂರಿನ ಸರ್ಜಾಪುರ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.ambulance-collides-truck-death-staff-nurse-on-the-spot

ಗುರುವಾರ ರಾತ್ರಿ 11 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು,  ಸಂಗಮೇಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭತ್ತ ತುಂಬಿದ ಲಾರಿಯನ್ನು ಇಂಡಿಕೇಟರ್​ ಹಾಕದೆಯೇ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಅವಸರದಲ್ಲಿ ಹೊರಟಿದ್ದ ಅಂಬ್ಯುಲೆನ್ಸ್ ಲಾರಿ ಕಾಣಿಸದ ಹಿನ್ನೆಲೆಯಲ್ಲಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

Key words: Ambulance-collides – truck-Death – Staff Nurse- on the spot.