Saturday, September 12, 2026

BDA Apartments

ಆಸಿಸ್ ವಿರುದ್ಧದ ಪಂದ್ಯದಲ್ಲಿ ವಿನೂತನ ದಾಖಲೆ ಬರೆದ ಪಾಂಡ್ಯ BDA JK_Adv BDA Adv
Home Front Page ಆಸಿಸ್ ವಿರುದ್ಧದ ಪಂದ್ಯದಲ್ಲಿ ವಿನೂತನ ದಾಖಲೆ ಬರೆದ ಪಾಂಡ್ಯ

ಆಸಿಸ್ ವಿರುದ್ಧದ ಪಂದ್ಯದಲ್ಲಿ ವಿನೂತನ ದಾಖಲೆ ಬರೆದ ಪಾಂಡ್ಯ

ಸಿಡ್ನಿ, ನವೆಂಬರ್ 28, 2020 (www.justkannada.in): ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿನೂತನ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಟೀಂ ಇಂಡಿಯಾ ಆಲ್ ರೌಂಡರ್ ರನ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಅತೀ ವೇಗದ 1000 ರನ್ ಪೂರೈಸಿದ ಭಾರತೀಯ ಎಂಬ ದಾಖಲೆಯನ್ನು ಹಾರ್ದಿಕ್ ತಮ್ಮದಾಗಿಸಿಕೊಂಡಿದ್ದಾರೆ.

ಒಟ್ಟು 857 ಎಸೆತಗಳಿಂದ ಪಾಂಡ್ಯ ಈ ದಾಖಲೆ ಮಾಡಿದ್ದಾರೆ. ಜಾಗತಿಕವಾಗಿ ವೆಸ್ಟ್ ಇಂಡೀಸ್ ನ ಆಂಡ್ರೆ ರಸೆಲ್ 787 ಎಸೆತಗಳಿಂದ ಈ ದಾಖಲೆ ಮಾಡಿ ನಂ.1 ಸ್ಥಾನದಲ್ಲಿದ್ದಾರೆ.