Saturday, August 8, 2026

BDA Apartments

Home Front Page ತುಂತುರು ಮಳೆ ನಡುವೆ ಮಾದಪ್ಪನ ದರ್ಶನ ಪಡೆದ ಸಿಎಂ ಬಿಎಸ್ ವೈ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ...

ತುಂತುರು ಮಳೆ ನಡುವೆ ಮಾದಪ್ಪನ ದರ್ಶನ ಪಡೆದ ಸಿಎಂ ಬಿಎಸ್ ವೈ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ…

ಚಾಮರಾಜನಗರ,ನವೆಂಬರ್,26,2020(www.justkannada.in):  ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು.CM BS yeddyurappa-visit –male mahadeshwara hills-chamaraja nagar-development works.

ಗುರುವಾರ ಬೆಳಗ್ಗೆ ತುಂತುರು ಮಳೆಯ ನಡುವೆ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಮಲೆ ಮಹದೇಶ್ವರನ ದರ್ಶನ ಪಡೆದರು. ಇದೇ ವೇಳೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಮ್ಮಿಕೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳಿಗೆ ಸಿ.ಎಂ ಯಡಿಯೂರಪ್ಪ ಚಾಲನೆ ನೀಡಿದರು.

ಮುಖ್ಯಮಂತ್ರಿ ಯಡಿಯೂರಪ್ಪಗೆ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್, ಶಾಸಕರಾದ ನರೇಂದ್ರ, ಎನ್ ಮಹೇಶ್ ಹಾಗೂ ನಿರಂಜನ್ ಕುಮಾರ್ ಸಾಥ್ ನೀಡಿದರು.

Key words: CM BS yeddyurappa-visit –male mahadeshwara hills-chamaraja nagar-development works.