Wednesday, August 26, 2026

BDA Apartments

Home Front Page ಕೊಡಗಿನ ಉಡುಗೆಯಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದ ಪ್ರತಾಪ್‌ಸಿಂಹ…

ಕೊಡಗಿನ ಉಡುಗೆಯಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿದ ಸಂಸದ ಪ್ರತಾಪ್‌ಸಿಂಹ…

ನವದೆಹಲಿ,ಜೂ,17,2019(www.justkannada.in): 2ನೇ ಬಾರಿಗೆ ಮೈಸೂರು-ಕೊಡಗು ಸಂಸದರಾಗಿ ಆಯ್ಕೆಯಾಗಿರುವ ಪ್ರತಾಪ್ ಸಿಂಹ ಇಂದು ಕೊಡಗಿನ ಉಡುಗೆಯಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿ ಪ್ರಮಾಣವಚನ ಸ್ವೀಕರಿಸಿದರು.

ಮೈಸೂರು ಕೊಡಗು ಸಂಸದರಾಗಿ ಎರಡನೆ ಆಯ್ಕೆಯಾಗಿರುವ ಪ್ರತಾಪ್‌ಸಿಂಹ ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು. ಸೊಂಟದ ಬಳಿ ಕೊಡಗಿನ ವೀರದ ಪ್ರತಿಕ ಖಡ್ಗವನ್ನು ತೊಟ್ಟು ಲೋಕಸಭೆಗೆ ಪ್ರವೇಶ ಪ್ರತಾಪ್ ಸಿಂಹ ಅವರು ಆತ್ಮೀಯರೊಂದಿಗೆ ಕೊಡಗಿನ ಡ್ರೆಸ್‌ನಲ್ಲೆ ಲೋಕಸಭೆ ಮುಂಭಾಗ ಪೋಟೋಗೆ ಪೋಸ್  ಕೊಟ್ಟರು.

ಅಲ್ಲದೆ ಕೊಡಗಿನ ವಸ್ತ್ರದಲ್ಲೇ  ಲೋಕಸಭೆ ಪ್ರವೇಶಿಸಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.

Key words: kodagu dress- mp Pratapsihma- entered-Parliament.