Saturday, August 15, 2026

BDA Apartments

Home Crime ನಿರ್ಮಾಣ ಹಂತದ ಟ್ಯಾಂಕ್ ಕುಸಿತ: ಮೂವರು ಸಾವು: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ…

ನಿರ್ಮಾಣ ಹಂತದ ಟ್ಯಾಂಕ್ ಕುಸಿತ: ಮೂವರು ಸಾವು: ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ…

ಬೆಂಗಳೂರು,ಜೂ,17,2019(www.justkannada.in):  ನಿರ್ಮಾಣ ಹಂತದ ಕಟ್ಟಡ ಕುಸಿದು ಹಲವು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಲುಂಬಿನಿ ಗಾರ್ಡನ್ ಬಳಿಯಲ್ಲಿರುವ ಜೋಗಪ್ಪ ಗಾರ್ಡ್ ನಲ್ಲಿ ಈ ಘಟನೆ ನಡೆದಿದೆ.  ಇಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಟ್ಯಾಂಕ್ ಕುಸಿತಗೊಂಡ ಪರಿಣಾಮ,  10ರಿಂದ 12 ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಅವಶೇಷಗಳಡಿ ಸಿಲುಕಿರುವವರನ್ನ ರಕ್ಷಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇನ್ನು 20ರಿಂದ 25ಕ್ಕೂ ಹೆಚ್ಚು  ಮಂದಿಯನ್ನ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ  ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

Key words: construction-Tank -collapse –  death-bangalore