Thursday, September 10, 2026

BDA Apartments

Home Front Page ಯಾರಿಗೆ ಐಪಿಎಲ್ ಕಪ್ !? ದಿಲ್ಲಿ ಅಥವಾ ಮುಂಬೈ? ಕುತೂಹಲಕ್ಕೆ ಇಂದು ತೆರೆ

ಯಾರಿಗೆ ಐಪಿಎಲ್ ಕಪ್ !? ದಿಲ್ಲಿ ಅಥವಾ ಮುಂಬೈ? ಕುತೂಹಲಕ್ಕೆ ಇಂದು ತೆರೆ

ದುಬೈ, ನವೆಂಬರ್ 10, 2020 (www.justkannada.in): ಐಪಿಎಲ್ ಫೈನಲ್ ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ ನಾಲ್ಕು ಬಾರಿ ಟ್ರೋಫಿ ಗೆದ್ದಿದ್ದು ಈ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ ಎರಡರಲ್ಲೂ ತುಂಬಾ ಬಲಿಷ್ಠವಾಗಿದೆ. ಇನ್ನೊಂದು ವಿಶೇಷವೆಂದರೆ ಎರಡು ತಂಡದ ನಾಯಕರು ಮುಂಬೈನವರೇ ಆಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊಟ್ಟ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು ಈ ಬಾರಿ ತನ್ನ ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಸಿಕ್ಕಿದೆ.
ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಲೇ ಇರುವ ಶಿಖರ್ ಧವನ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ತಂದುಕೊಡ್ತಾರ ನೋಡಬೇಕಿದೆ.