Wednesday, September 2, 2026

BDA Apartments

Home Cinema ಸುದ್ದಿವಾಹಿನಿಗಳ ಛಾಯಾಗ್ರಾಹಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ದೀಪಿಕಾ

ಸುದ್ದಿವಾಹಿನಿಗಳ ಛಾಯಾಗ್ರಾಹಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ದೀಪಿಕಾ

ಬೆಂಗಳೂರು, ನವೆಂಬರ್ 10, 2020 (www.justkannada.in): ದೀಪಿಕಾ ಪಡುಕೋಣೆ ಡ್ರಗ್ಸ್ ಪ್ರಕರಣದ ವಿಚಾರಣೆ ಬಳಿಕ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ದೀಪಿಕಾ ಮನೆಯಿಂದ ಹೊರ ಬಂದರೆ ಸಾಕು ಸುದ್ದಿವಾಹಿನಿಗಳ ಛಾಯಾಗ್ರಾಹಕರು ಹಿಂಬಾಲಿಸಲು ಪ್ರಾರಂಭಿಸುತ್ತಾರೆ. ಇದರಿಂದ ಬೇಸತ್ತ ದೀಪಿಕಾ ಖಡಕ್ ವಾರ್ನಿಗ್ ನೀಡಿದ್ದಾರೆ.
ಇತ್ತೀಚಿಗೆ ದೀಪಿಕಾ ಪಡುಕೋಣೆ ಮುಂಬೈನ ಧರ್ಮ ಪ್ರೊಡಕ್ಷನ್ ಭೇಟಿ ನೀಡಿದ್ದರು. ಈ ಸಮಯದಲ್ಲಿ ಛಾಯಾಗ್ರಾಹಕರಿಗೆ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ.

ದೀಪಿಕಾ ಕಾರನ್ನು ಬೆನ್ನಟ್ಟಿದ ಛಾಯಾಗ್ರಾಹಕರು ಮತ್ತಷ್ಟು ಫೋಟೋ ಕ್ಲಿಕ್ಕಿಸಲು, ವೀಡಿಯೋ ಚಿತ್ರೀಕರಣಕ್ಕೆ ಪ್ರಯತ್ನ ಪಟ್ಟಿದ್ದಾರೆ.  ಇದರಿಂದ ಸಿಟ್ಟಿಗೆದ್ದ ದೀಪಿಕಾ ಕಾರಿನಿಂದ ಇಳಿದು, ಹೀಗೆಲ್ಲಾ ಹಿಂಬಾಲಿಸ ಬೇಡಿ ಎಂದು ಹೇಳಿದ್ದಾರೆ. ನಂತರ ತಾಳ್ಮೆ ಕಳೆದುಕೊಂಡ ದೀಪಿಕಾ ಎಲ್ಲಾ ಕಡೆ ಹೀಗೆ ಹಿಂಬಾಲಿಸಿದರೇ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.