Monday, September 28, 2026

BDA Apartments

ಪರಾರಿಗೆ ಯತ್ನಿಸಿದ ಸುಲಿಗೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧನ BDA JK_Adv BDA Adv
Home Crime ಪರಾರಿಗೆ ಯತ್ನಿಸಿದ ಸುಲಿಗೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧನ 

ಪರಾರಿಗೆ ಯತ್ನಿಸಿದ ಸುಲಿಗೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧನ 

ಬೆಂಗಳೂರು,ನವೆಂಬರ್,08,2020(www.justkannada.in) :  ಕೈಯಲ್ಲಿ ಮಚ್ಚು ಹಿಡಿದು ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಸುಲಿಗೆಕೋರ ಅರ್ಬಾಜ್ ಖಾನ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ಎಚ್.ಆರ್.ಬಿ.ಆರ್.ಲೇಔಟ್ ನಲ್ಲಿ ನಡೆದಿದೆ.kannada-journalist-media-fourth-estate-under-lossಬಾಣಸವಾಡಿ ಇನ್ ಸ್ಪೆಕ್ಟರ್ ಜಯರಾಜ್, ಸುಲಿಗೆಕೋರನ ಮೇಲೆ ಫೈರಿಂಗ್ ಮಾಡಿದ್ದಾರೆ. ಮಾರಕಾಸ್ತ್ರ ತೋರಿಸಿ ಹಣ ಸುಲಿಗೆ ಮಾಡಿದ್ದ ಆರೋಪಿ ಅರ್ಬಾಜ್ ಖಾನ್ ನನ್ನು ಇಂದು ಬೆಳಗ್ಗೆ ಬಂಧಿಸಲಾಗಿತ್ತು.

ಕಾಲಿಗೆ ಗುಂಡು ಹಾರಿಸಿ ಅರ್ಬಾಜ್ ನನ್ನು ಪೊಲೀಸರು ಬಂಧನ

ಮಾರಕಾಸ್ತ್ರಗಳನ್ನ ವಶಕ್ಕೆ ಪಡೆಯಲು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಆರೋಪಿ  ಪೊಲೀಸರು ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದ. ಶರಣಾಗುವಂತೆ ತಿಳಿಸಿದರೂ ಕೇಳದೆ ಪರಾರಿಗೆ ಯತ್ನಿಸಿದ್ದಾನೆ. ಹೀಗಾಗಿ, ಕಾಲಿಗೆ ಗುಂಡು ಹಾರಿಸಿ ಅರ್ಬಾಜ್ ನನ್ನು ಪೊಲೀಸರು ಬಂಧಿಸಿದ್ದರು.

key words : rapist-rying-escape-Shot-leg-arrested