Friday, September 18, 2026

BDA Apartments

ಬಿಜೆಪಿ ಭೀಷ್ಮ ಎಲ್‌.ಕೆ.ಅಡ್ವಾಣಿ ಅವರಿಗೆ 93ನೇ ಜನ್ಮದಿನ : ಗಣ್ಯರಿಂದ ಶುಭಾಶಯ BDA ...
Home Front Page ಬಿಜೆಪಿ ಭೀಷ್ಮ ಎಲ್‌.ಕೆ.ಅಡ್ವಾಣಿ ಅವರಿಗೆ 93ನೇ ಜನ್ಮದಿನ : ಗಣ್ಯರಿಂದ ಶುಭಾಶಯ

ಬಿಜೆಪಿ ಭೀಷ್ಮ ಎಲ್‌.ಕೆ.ಅಡ್ವಾಣಿ ಅವರಿಗೆ 93ನೇ ಜನ್ಮದಿನ : ಗಣ್ಯರಿಂದ ಶುಭಾಶಯ

ಬೆಂಗಳೂರು,ನವೆಂಬರ್,08,2020(www.justkannada.in) : ಬಿಜೆಪಿ ಭೀಷ್ಮ, ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರ 93ನೇ ಜನ್ಮದಿನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.jk-logo-justkannada-logo

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಬಿಜೆಪಿಯನ್ನು ಜನಮಾನಸದ ಪಕ್ಷವನ್ನಾಗಿ ಬೆಳೆಸಿದ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯ.

ಪಕ್ಷದ ಕೋಟ್ಯಂತರ ಕಾರ್ಯಕರ್ತರು ಹಾಗೂ ಸಮಸ್ತ ಭಾರತೀಯರಿಗೆ ಪ್ರೇರಣಾ ಶಕ್ತಿಯಾಗಿರುವ ಎಲ್‌.ಕೆ.ಅಡ್ವಾಣಿ, ಅವಿರತವಾಗಿ ದೇಶ ಸೇವೆ ಸಲ್ಲಿಸುತ್ತಿರುವ ನಾಯಕ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲಾ ಸಾಗಿ ದೇಶಸೇವೆ ಮಾಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.BJP's-Bhishma-L.K.Adani-93rd-Birthday-Greetings-elite

ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಎಲ್‌.ಕೆ.ಅಡ್ವಾಣಿ ಅವರ 93ನೇ ಜನ್ಮದಿನಕ್ಕೆ ಶುಭ ಕೋರಿ, ಪಕ್ಷದ ಅಧ್ಯಕ್ಷರಾಗಿ ಹಾಗೂ ಉಪ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರಾಗಿ ಎಲ್‌.ಕೆ. ಅಡ್ವಾಣಿ ದೇಶಕ್ಕೆ ನೀಡಿದ ಕೊಡುವೆ ಅಪಾರ. ಅವರು ತೋರಿದ ದಾರಿಯಲ್ಲಿ ನಾವು ನಡೆಯುತ್ತೇವೆ ಎಂದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ‘ಪಕ್ಷದ ಹಿರಿಯ ನೇತಾರ, ಮಾಜಿ ಉಪಪ್ರಧಾನಮಂತ್ರಿ, ಪದ್ಮವಿಭೂಷಣ ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಜನ್ಮದಿನದ  ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಶುಭಕೋರಿದ್ದಾರೆ.BJP's-Bhishma-L.K.Adani-93rd-Birthday-Greetings-elite

key words : BJP’s-Bhishma-L.K.Adani-93rd-Birthday-Greetings-elite