Saturday, August 15, 2026

BDA Apartments

Home Crime ಹನೂರು ತಾಲೂಕಿನಲ್ಲಿ ಅರಿಶಿಣದ ನಡುವೆ ಗಾಂಜಾ : ಆರೋಪಿ ಬಂಧನ 

ಹನೂರು ತಾಲೂಕಿನಲ್ಲಿ ಅರಿಶಿಣದ ನಡುವೆ ಗಾಂಜಾ : ಆರೋಪಿ ಬಂಧನ 

ಚಾಮರಾಜನಗರ,ನವೆಂಬರ್,08,2020(www.justkannada.in) : ಜಿಲ್ಲೆಯ ಹನೂರು ತಾಲೂಕಿನ ನಾಗನಕಟ್ಟೆ ದೊಡ್ಡಿ ಗ್ರಾಮದಲ್ಲಿ ಅರಿಶಿಣದ ನಡುವೆ ಗಾಂಜಾ ಬೆಳೆದಿದ್ದನ್ನು ಪತ್ತೆ ಹಚ್ಚಿ ನೂರಾರು ಕೆಜಿ ಮಾದಕವಸ್ತು ವಶಪಡಿಸಿಕೊಳ್ಳಲಾಗಿದೆ.

kannada-journalist-media-fourth-estate-under-loss

ಮಾಲು ಸಮೇತ ಆರೋಪಿ ಬಂಧನ

ಗ್ರಾಮದ ವಡಿವೇಲು(35) ಎಂಬಾತ ಅಕ್ರಮವಾಗಿ ಅರಿಶಿಣದ ಬೆಳೆ ನಡುವೆ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಹನೂರು ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

290 ಕೆ.ಜಿ ತೂಕದ 120 ಗಾಂಜಾ ಗಿಡಗಳ ವಶ 

ಬಂಧಿತನಿಂದ 290 ಕೆ.ಜಿ ತೂಕದ 120 ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ‌. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಬೆಳೆ ನಡುವೆ ಗಾಂಜಾ ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಹನೂರು ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.Cannabis-among-turmeric-Hanoor-taluk-accused- arrested

key words : Cannabis-among-turmeric-Hanoor-taluk-accused- arrested