Tuesday, September 29, 2026

BDA Apartments

ಬಿಜೆಪಿಯಲ್ಲಿ ಪ್ರಮೋಷನ್,ಡಿಮೋಷನ್ ಗಳಾಗುತ್ತವೆ : ಡಿ.ಕೆ.ಶಿವಕುಮಾರ್ ಟೀಕೆ BDA JK_A...
Home Front Page ಬಿಜೆಪಿಯಲ್ಲಿ ಪ್ರಮೋಷನ್,ಡಿಮೋಷನ್ ಗಳಾಗುತ್ತವೆ : ಡಿ.ಕೆ.ಶಿವಕುಮಾರ್ ಟೀಕೆ 

ಬಿಜೆಪಿಯಲ್ಲಿ ಪ್ರಮೋಷನ್,ಡಿಮೋಷನ್ ಗಳಾಗುತ್ತವೆ : ಡಿ.ಕೆ.ಶಿವಕುಮಾರ್ ಟೀಕೆ 

ಬೆಂಗಳೂರು,ನವೆಂಬರ್,01,2020(www.justkannada.in)  :  ಬಿಜೆಪಿಯಲ್ಲಿ ಪ್ರಮೋಷನ್, ಡಿಮೋಷನ್ ಗಳಾಗುತ್ತವೆ. ಹೀಗಾಗಿ, ಪಕ್ಷದ ನಾಯಕರ ಮೆಚ್ಚಿಸುವ ಸಲುವಾಗಿ ಏನೇನೋ ಮಾತನಾಡುತ್ತಾರೆ ಎಂದು ವಿಪಕ್ಷ ನಾಯಕ ಡಿ.ಕೆ.ಶಿವಕುಮಾರ್ ವಿಧಾನಪರಿಷತ್ ಸದಸ್ಯ ವಿಶ್ವನಾಥ್ ವಿರುದ್ಧ ಕಿಡಿಕಾರಿದರು.

jk-logo-justkannada-logo

ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಸಿದ್ದರಾಮಯ್ಯ ಮೊದಲು ಯಾವ ನಾಯಿ ಎಂದು ತಿಳಿಸಲಿ ಎಂಬ ಹೇಳಿಕೆ ಸಂಬಂಧಿಸಿದಂತೆ ಡಿಕೆಶಿ ಆಕ್ರೋಶವ್ಯಕ್ತಪಡಿಸಿದರು.

ಯಾವ ನಾಯಕರ ಮಾತಿಗೂ ಕಿಮ್ಮತ್ತಿಲ್ಲ. ಅವರ ಅನುಕೂಲಕ್ಕೆ ಏನೇನೋ ಮಾತನಾಡುತ್ತಾರೆ. ಬಿಜೆಪಿಯಲ್ಲಿ ಪ್ರಮೋಷನ್, ಡಿಮೋಷನ್ ಇರುವುದರಿಂದ ತಮ್ಮ ನಾಯಕರ ಮೆಚ್ಚುಗೆಗಳಿಸಲು ಹೀಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಹಿಂದೂಗಳು ಬಿಜೆಪಿ ಆಸ್ತಿನಾ?

ಚುನಾವಣೆಯಲ್ಲಿ ಹಣ ಹಂಚುವ ಕೆಸಲ ನಡೆಯುತ್ತಿವೆ. ಹಿಂದೂಗಳು ಬಿಜೆಪಿ ಆಸ್ತಿನಾ? ನಾವು ಹಿಂದೂಗಳು ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.

key words : Promotion-BJP-Demotion-Will-become-DK Shivakumar-criticizes