Saturday, August 8, 2026

BDA Apartments

Home Crime ಐಎಂಎ ಸಂಸ್ಥೆ ನಿರ್ದೇಶಕರ ಮನೆ ಮೇಲೆ ಎಸ್ ಐಟಿ ದಾಳಿ ಪರಿಶೀಲನೆ…

ಐಎಂಎ ಸಂಸ್ಥೆ ನಿರ್ದೇಶಕರ ಮನೆ ಮೇಲೆ ಎಸ್ ಐಟಿ ದಾಳಿ ಪರಿಶೀಲನೆ…

ಬೆಂಗಳೂರು,ಜೂ,15,2019(www.justkannada.in): ಹೂಡಿಕೆದಾರರಿಗೆ ಐಎಂಎ ಜ್ಯೂವೆಲ್ಲರಿ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಐಎಂಎ ಸಂಸ್ಥೆಯ ನಿರ್ದೇಶಕರ ಮನೆ ಮೇಲೆ ಎಸ್ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಾವಿರಾರು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಸಂಸ್ಥೆ ನಿರ್ದೇಶಕರಾದ ನಿಜಾಮುದ್ದಿನ್, ವಸೀಂ, ಅಪ್ಸರ್ ಪಾಷಾ, ನಾಸೀರ್ ಹುಸೇನ್,  ನವೀದ್ ಅಹ್ಮದ್, ದಾದಾಪಿರ್  ಸೇರಿ 7 ಮಂದಿ ಈಗಾಗಲೇ ಎಸ್ ಐಟಿ ಕಸ್ಟಡಿಯಲ್ಲಿದ್ದಾರೆ. ಈ ನಡುವೆ ಬಂಧಿತ 7 ಮಂದಿ ಜಾಮೀನಿಗಾಗಿ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ ಎಸ್ ಐಟಿ ಅಧಿಕಾರಿಗಳು ಇಂದು ಬಂಧಿತ ಐಎಂಎ ನಿರ್ದೇಶಕರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಇಂದಿರಾನಗರ, ಕೆ.ಆರ್ ಪುರಂ, ಶಿವಾಜಿ ನಗರ, ಪ್ರೆಜರ್ ಟೌನ್ ಸೇರಿ ಹಲವೆಡೆ ದಾಳಿ ನಡೆಸಿದ್ದು,  ಸ್ವಇಚ್ಛಾ ಹೇಳಿಕೆ ಮತ್ತು ಕೆಲ ದಾಖಲೆಗಳನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಐಎಂಎ ಸಂಸ್ಥೇ ಮಾಲೀಕನಾದ ಮನ್ಸೂರ್ ಖಾನ್  ಬಂಧನಕ್ಕೆ ಬಲೆ ಬೀಸಿದ್ದಾರೆ.

Key words: SIT attack on IMA agency director’s home.

#IMAfraudcase  #director’s #home #SIT