Sunday, September 13, 2026

BDA Apartments

ದಲಿತ ಪ್ರೇಮ ಕೇವಲ ನಾಟಕ : ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಬಾಣ BDA JK_Adv BDA Adv
Home Front Page ದಲಿತ ಪ್ರೇಮ ಕೇವಲ ನಾಟಕ : ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಬಾಣ

ದಲಿತ ಪ್ರೇಮ ಕೇವಲ ನಾಟಕ : ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್ ಬಾಣ

ಬೆಂಗಳೂರು,ಅಕ್ಟೋಬರ್,26,2020(www.justkannada.in) : ನಿಮ್ಮ ಆಡಳಿತದಲ್ಲಿ ಪ್ರತಿ 4 ಗಂಟೆಗೆ ಒಬ್ಬ ದಲಿತನ ಮೇಲೆ ದೌರ್ಜನ್ಯ ಪ್ರತಿ 5 ದಿನಕ್ಕೆ ಒಬ್ಬ ದಲಿತನ ಕೊಲೆ ಇಷ್ಟೆಲ್ಲಾ ಆಗುತ್ತಿದ್ದರೂ, ನೀವು ಮಾತ್ರ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಮಜವಾದಿಯಂತೆ ಕಾಲ ಕಳೆಯುತ್ತಿದ್ದಿರಿ ! ನಿಮ್ಮ ದಲಿತ ಪ್ರೇಮ ಕೇವಲ ನಾಟಕವಲ್ಲವೇ ಎಂದು ಬಿಜೆಪಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಟ್ವಿಟರ್ ನಲ್ಲಿ ವಾಗ್ದಾಳಿ ನಡೆಸಿದೆ.

jk-logo-justkannada-logoಐದು ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಪ್ರಶ್ನಿಸಿದೆ.

ಗಲಭೆಯಲ್ಲಿ ಭಾಗಿಯಾದವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್

ನಿಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಮತಾಂಧರು ಬೆಂಕಿಯಿಟ್ಟರುನೀವು ಮಾಡಿದ್ದಾದರೂ ಏನು? ದಲಿತ ಶಾಸಕನನ್ನು ರಕ್ಷಿಸುವುದನ್ನು ಬಿಟ್ಟು ಗಲಭೆಯಲ್ಲಿ ಭಾಗಿಯಾದವರಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ನೀಡಿದಿರಿ. ಮತಾಂಧರ ಮೇಲೆ ಇರುವಷ್ಟು ಪ್ರೇಮ ದಲಿತರ ಮೇಲೇಕಿಲ್ಲ ಸಿದ್ದರಾಮಯ್ಯ? ಎಂದು ಕಿಡಿಕಾರಿದೆ.

 

ದಲಿತನೊಬ್ಬ ಮುಖ್ಯಮಂತ್ರಿಯಾಗಬಾರದು ಮತ್ತು ನಾನೇ ಸಿಎಂ ಆಗಬೇಕು

 

2013 ರಲ್ಲಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರೇ ಮುಖ್ಯಮಂತ್ರಿಯಾಗಬೇಕಿತ್ತು. ಇದನ್ನು ತಿಳಿದ ನೀವು, ದಲಿತನೊಬ್ಬ ಮುಖ್ಯಮಂತ್ರಿಯಾಗಬಾರದು ಮತ್ತು ನಾನೇ ಸಿಎಂ ಆಗಬೇಕು ಎಂಬ ಕಾರಣಕ್ಕೆ ಸೋಲಿಸಿದಿರಿ. ಇದು ನ್ಯಾಯವೇ? ಎಂದು ವ್ಯಂಗ್ಯವಾಡಿದೆ.

 

ದಲಿತರ ರಕ್ಷಣೆಗಿಂತ ಟಿಪ್ಪು ಜಯಂತಿ ಆಚರಣೆ ಮುಖ್ಯವಾಯಿತಲ್ಲವೇ?

Dalit-love-just-drama-Siddaramaiah vs BJP-Tweet-Arrow

ನಿಮ್ಮ ತುಘಲಕ್ ದರ್ಬಾರ್ ನಲ್ಲಿ : 350 ಕ್ಕೂ ಹೆಚ್ಚು ದಲಿತರ ಕೊಲೆಗಳಾದವು. 800 ಕ್ಕೂ ಅಕ ದಲಿತ ಮಹಿಳೆಯರ ಮೇಲೆ ಅತ್ಯಾಚಾರವಾಯಿತು. 9000 ಕ್ಕೂ ಹೆಚ್ಚು ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದವು. ದಲಿತರ ರಕ್ಷಣೆಗಿಂತ ನಿಮಗೆ ಟಿಪ್ಪು ಜಯಂತಿ ಆಚರಣೆ ಮುಖ್ಯವಾಯಿತಲ್ಲವೇ? ಮುಖ್ಯಮಂತ್ರಿಯಾಗಲು ನಿಮಗೆ ದಲಿತರು ಬೇಕಿತ್ತು. ಆದರೆ, ಕಾಂಗ್ರೆಸ್ ಅಧಿಕಾರಕ್ಕೇರಲು ಶ್ರಮಿಸಿದ ನಿಮ್ಮದೇ ಪಕ್ಷದ ದಲಿತ ನಾಯಕ ಪರಮೇಶ್ವರರನ್ನು ರಾಜಕೀಯವಾಗಿ ಮುಗಿಸಲು ಹೊಂಚು ಹಾಕಿದಿರಿ. ಒಮ್ಮೆ ಸೋಲಿಸಿದಿರಿ, ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟ ಕಸಿದುಕೊಂಡಿರಿ, ಇದೇ ದಲಿತ ಪ್ರೇಮವೇ? ಎಂದು ಸಿದ್ದರಾಮಯ್ಯ ಅವರಿಗೆ ಟ್ವೀಟರ್ನಲ್ಲಿ ಪ್ರಶ್ನೆಗಳ ವಾಗ್ಬಾಣ ಬಿಡಲಾಗಿದೆ.

 

key words : Dalit-love-just-drama-Siddaramaiah vs BJP-Tweet-Arrow