Monday, October 5, 2026

BDA Apartments

ಬಿ.ಎಸ್.ವೈ ಮುಕ್ತ ಬಿಜೆಪಿ ಆಗುವ ಕಾಲವೂ ಸನ್ನಿಹಿತ : ರಾಜ್ಯ ಕಾಂಗ್ರೆಸ್ ಟೀಕೆ BDA J...
Home Front Page ಅರಮನೆ ಆವರಣದಲ್ಲಿ 300 ಜನರಿಗೆ ಮಾತ್ರ ಅವಕಾಶ : ಸಚಿವ ಎಸ್.ಟಿ.ಸೋಮಶೇಖರ್ 

ಅರಮನೆ ಆವರಣದಲ್ಲಿ 300 ಜನರಿಗೆ ಮಾತ್ರ ಅವಕಾಶ : ಸಚಿವ ಎಸ್.ಟಿ.ಸೋಮಶೇಖರ್ 

ಮೈಸೂರು,ಅಕ್ಟೋಬರ್,25,2020(www.justkannada.in) : ದಸರಾ ಮಹೋತ್ಸವಕ್ಕೆ ಎಲ್ಲಾ ರೀತಿ ಸಿದ್ದತೆ ಮಾಡಿಕೊಳ್ಳಲಾಗಿದೆ‌. ಅರಮನೆ ಆವರಣದಲ್ಲಿ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.jk-logo-justkannada-logo

ಭಾನುವಾರ ಮಾಧ್ಯಮದವರಿಗೆ ದಸರಾ ಜಂಬೂಸವಾರಿ ಕುರಿತು ಮಾಹಿತಿ ನೀಡಿದ ಅವರು, ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕಾರ್ಯಕ್ರಮ ಮಾಡುತ್ತಿದ್ದೇವೆ. ಈಗಾಗಲೇ ಅಧಿಕಾರಿಗಳು ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿದ್ದಾರೆ. ಯಾವುದೇ ಅಡೆಚಣೆ ಇಲ್ಲದೇ ಕಾರ್ಯಕ್ರಮ ಸುಸೂತ್ರವಾಗಿ ನಡೆಯುತ್ತೆ ಎಂದು ಮಾಹಿತಿ ನೀಡಿದರು.

Only,300 people,accommodated,palace,premises,Minister S.T. Somashekhar

ಮೈಸೂರಿನ ಜನತೆ ಎಲ್ಲಾ ಸಂದರ್ಭದಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಬ್ಬದ ಶುಭಾಶಯ ತಿಳಿಸಿದರು.

key words : Only-300 people-accommodated-palace-premises-Minister S.T. Somashekhar