Tuesday, August 4, 2026

BDA Apartments

Home Front Page ನಾನು ನಿಮ್ಮ ಮನೆ ಮಗಳು: ನಿಮ್ಮ ಸೇವೆಗೆ ಒಂದು ಅವಕಾಶ ಕೊಡಿ- ”ಕೈ ಅಭ್ಯರ್ಥಿ ಕುಸುಮಾ...

ನಾನು ನಿಮ್ಮ ಮನೆ ಮಗಳು: ನಿಮ್ಮ ಸೇವೆಗೆ ಒಂದು ಅವಕಾಶ ಕೊಡಿ- ”ಕೈ ಅಭ್ಯರ್ಥಿ ಕುಸುಮಾ ಮತಯಾಚನೆ

ಬೆಂಗಳೂರು,ಅಕ್ಟೋಬರ್,24,2020(www.justkannada.in):  ‘ನಾನು ನಿಮ್ಮ ಮನೆಮಗಳು. ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿ ಕೊಡಿ’ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್ ಮತದಾರರಲ್ಲಿ ಮನೆ ಮಾಡಿದ್ದಾರೆ.

ಶನಿವಾರ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜತೆ ಪ್ರಚಾರ ನಡೆಸಿದ ಕುಸುಮಾ ಅವರು ಹೇಳಿದ್ದಿಷ್ಟು:

‘ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶ ಮಾಡಿಕೊಡಿ. ನಿಮ್ಮ ಮಗಳಾಗಿ ನಾನು ಸದಾ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗಿರುತ್ತೇನೆ. ನೀವು ಕೊಡುವ ಅವಕಾಶವನ್ನು ಬಳಸಿಕೊಂಡು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ಕೆಲಸ ಮಾಡಿ ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ.rr nagar- byelection-congress- candidate-kusuma

ನೀವು ಕೊಡುವ ಅವಕಾಶ ಪ್ರೋತ್ಸಾಹವನ್ನು ಹಣ ಅಥವಾ ಅಧಿಕಾರದ ಆಸೆಗೆ ಮಾರಿಕೊಳ್ಳುವುದಿಲ್ಲ. ನವೆಂಬರ್ 3ರಂದು ನಡೆಯುವ ಚುನಾವಣೆಯಂದು ಕ್ರಮ ಸಂಖ್ಯೆ 1, ಹಸ್ತದ ಗುರುತಿಗೆ ನಿಮ್ಮ ಮತ ನೀಡಿ ಮನೆ ಮಗಳಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

key words: rr nagar- byelection-congress- candidate-kusuma