Thursday, October 1, 2026

BDA Apartments

Welcome to Just Kannada Online News Portal BDA JK_Adv BDA Adv
Home Front Page ಗೂಂಡಾಗಿರಿಗೆ ಮತ್ತೊಂದು ಹೆಸರೇ ಡಿಕೆಶಿ ಮತ್ತು ಡಿಕೆ ಸುರೇಶ್- ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ…

ಗೂಂಡಾಗಿರಿಗೆ ಮತ್ತೊಂದು ಹೆಸರೇ ಡಿಕೆಶಿ ಮತ್ತು ಡಿಕೆ ಸುರೇಶ್- ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ…

ದಾವಣಗೆರೆ,ಅಕ್ಟೋಬರ್,24,2020(www.justkannada.in):  ಆರ್ ಆರ್ ನಗರದಲ್ಲಿ ಬಿಜೆಪಿಯು ಕಾಂಗ್ರೆಸ್ ಅಭ್ಯರ್ಥಿ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎನ್ನುವ ಆರೋಪ  ಮಾಡಿರುವ ಕುರಿತು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ, ನಾವು ದೌರ್ಜನ್ಯ ಮಾಡ್ತಾ ಇದೀವಿ ಅವರು ತಪಸ್ಸು ಮಾಡ್ತಾ ಇದಾರೆ ಪಾಪಾ. ಗೂಂಡಾಗಿರಿಗೆ ಮತ್ತೊಂದು ಹೆಸರೇ ಡಿಕೆಶಿ ಮತ್ತೇ ಡಿ.ಕೆ ಸುರೇಶ್ ಎಂದು ಕಿಡಿಕಾರಿದರು.jk-logo-justkannada-logo

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಕಲ್ಮಠದಲ್ಲಿ ಮಾತನಾಡಿದ ಸಚಿವ ಕೆಎಸ್ ಈಶ್ವರಪ್ಪ, ಗೂಂಡಾಗಿರಿಗೆ ಮತ್ತೊಂದು ಹೆಸರೇ ಡಿಕೆಶಿ ಮತ್ತೇ ಡಿಕೆ ಸುರೇಶ್. ಅವರ ಬಗ್ಗೆ ಇಡೀ ರಾಜ್ಯದ ಜನರಿಗೆ ಗೊತ್ತು.. ತಮ್ಮ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದ್ರು ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದರು.

ನೆರೆ ಪ್ರವಾಹಕ್ಕೆ ಎಲ್ಲಾ ಸಚಿವರು ಹೋಗಿದ್ದರು ಇಬ್ಬರನ್ನು ಬಿಟ್ಟು. ಶಶಿಕಲಾ ಜೊಲ್ಲೆ ಹಾಗೂ ಗೋವಿಂದ ಕಾರಜೋಳಾರಿಗೆ ಕೊರೋನಾ ಬಂದಿತ್ತು. ಅವರು ಬೆಂಗಳೂರಿನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದರು. ನೆರೆ ಹಾವಳಿ ಉಂಟಾದ ಕಡೆ ಈಗಾಗಲೇ ಸರ್ವೆ ಮಾಡಿಸಲಾಗುತ್ತಿದೆ. ಸರ್ವೇ ಮುಗಿದ ನಂತರ ಅವರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.Gundagiri - another -name –DK Shivakumar- DK Suresh-  Minister- KS Eshwarappa

ಸಿಎಂ ವಿರುದ್ದ ಮಾತನಾಡಿದ್ದ ಯತ್ನಾಳ್ ಗೆ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯೆ ಸಚಿವ ಕೆ,ಎಸ್ ಈಶ್ವರಪ್ಪ, ಪಕ್ಷಕ್ಕೆ ಕಿರಿಕಿರಿ ಮಾಡ್ತಾ ಇರುವ ಅ ವ್ಯಕ್ತಿ ಯಾರು ಅಂತ ಜನರಿಗೆ ಈಗಾಗಲೇ ಗೊತ್ತಾಗಿದೆ. ಪಕ್ಷಕ್ಕೆ ಪದೇ ಪದೇ ಕಿರಿಕಿರಿ‌ ಮಾಡ್ತಾ ಇದಾನೆ‌ ಅಂತ ಜನರಿಗೆ ಗೊತ್ತಿದೆ. ಆತನ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯಾಧ್ಯಕ್ಷರಿಗೆ ತಿಳಿಸಲಾಗಿದೆ, ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

Key words: Gundagiri – another -name –DK Shivakumar- DK Suresh-  Minister- KS Eshwarappa