Saturday, August 22, 2026

BDA Apartments

Home Cinema ಝೀ ಕನ್ನಡದಲ್ಲಿ ಯೋಗರಾಜ್ ಭಟ್ ‘ಪಂಚತಂತ್ರ’

ಝೀ ಕನ್ನಡದಲ್ಲಿ ಯೋಗರಾಜ್ ಭಟ್ ‘ಪಂಚತಂತ್ರ’

ಬೆಂಗಳೂರು, ಜೂನ್ 15, 2019 (www.justkannada.in):

ಬೆಂಗಳೂರು: ಯೋಗರಾಜ ಭಟ್ ನಿರ್ದೇಶನದ ಇತ್ತೀಚೆಗಷ್ಟೇ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ ಪಂಚತಂತ್ರ ಇದೀಗ ಪ್ರಥಮ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಹೊಸ ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ದಿನಗಳಿಗೆ ಕಿರುತೆರೆಯಲ್ಲಿ ಪ್ರಸಾರವಾಗುವುದು ಹೊಸದೇನಲ್ಲ. ಇದೀಗ ಜೀ ಕನ್ನಡದಲ್ಲಿ ಜೂನ್ 23 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಪಂಚತಂತ್ರ ಸಿನಿಮಾ ಪ್ರಸಾರವಾಗಲಿದೆ.

ರೇಸ್ ಹಿನ್ನಲೆಯ ಕತೆಯುಳ್ಳ ಪಂಚತಂತ್ರ ಹಾಡುಗಳು ಮತ್ತು ವಿಭಿನ್ನ ಕತೆಯ ಮೂಲಕ ಹೊಸಬರ ತಾರಾಗಣವಿದ್ದರೂ ಸೂಪರ್ ಹಿಟ್ ಆಗಿತ್ತು. ಇದೀಗ ಅದನ್ನು ಕಿರುತೆರೆಯಲ್ಲಿ ನೋಡಿ ಆನಂದಿಸಬಹುದು.