Friday, September 25, 2026

BDA Apartments

ತಾಯಿ,ಮಗಳು,ಮೊಮ್ಮಗಳಿಂದ ಆತ್ಮಹತ್ಯೆಗೆ ಯತ್ನ : ಮಗಳು ಸಾವು BDA JK_Adv BDA Adv
Home Crime ತಾಯಿ,ಮಗಳು,ಮೊಮ್ಮಗಳಿಂದ ಆತ್ಮಹತ್ಯೆಗೆ ಯತ್ನ : ಮಗಳು ಸಾವು

ತಾಯಿ,ಮಗಳು,ಮೊಮ್ಮಗಳಿಂದ ಆತ್ಮಹತ್ಯೆಗೆ ಯತ್ನ : ಮಗಳು ಸಾವು

ಮೈಸೂರು,ಅಕ್ಟೋಬರ್,19,2020(www.justkannada.in): ಒಂದೇ ಕುಟುಂಬದ ಮೂವರು ಕಪಿಲಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಒಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.jk-logo-justkannada-logo

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಮಲ್ಲನ ಮೂಲೆ ಮಠದ ಬಳಿ ತಾಯಿ, ಮಗಳು ಹಾಗೂ ಮೊಮ್ಮಗಳು ಆತ್ಮಹತ್ಯೆ ಯತ್ನಸಿದ್ದು, ಈ ಸಂದರ್ಭ ಮಗಳು ಸಾವನ್ನಪ್ಪಿದ್ದು, ತಾಯಿ ಹಾಗೂ ಮೊಮ್ಮಗಳ ರಕ್ಷಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಮೂವರು ಮೈಸೂರಿನ ಜೆಎಸ್‌ಎಸ್ ಲೇಔಟ್ ನಿವಾಸಿಗಳಾಗಿದ್ದಾರೆ.

Attempted-suicide-mother-daughter-granddaughter- daughter's-death

ಮಗಳು ರಶ್ಮಿ(35 ವರ್ಷ) ಮೃತಪಟ್ಟಿದ್ದು, ತಾಯಿ ಅಂಕಮ್ಮ ಹಾಗೂ ಮೊಮ್ಮಗಳು ಮಿಂಚು ಅವರನ್ನು ನದಿ ದಂಡೆಯಲ್ಲಿದ ವ್ಯಕ್ತಿಗಳು ರಕ್ಷಿಸಿದ್ದಾರೆ. ತಾಯಿ ಹಾಗೂ ಮೊಮ್ಮಗಳನ್ನು ಜೆಎಸ್‌ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.  ನಂಜನಗೂಡು ಗ್ರಾಮಾಂತರ ಪೊಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

key words : Attempted-suicide-mother-daughter-granddaughter- daughter’s-death