Sunday, August 23, 2026

BDA Apartments

Home Front Page ಸಿಎಂ ಬಿಎಸ್ ವೈ ಈ ಹೇಳಿಕೆಯನ್ನ ಹಿಂಪಡೆಯಲೇಬೇಕು- ಮಾಜಿ ಸಂಸದ ಧೃವನಾರಾಯಣ್ ಒತ್ತಾಯ…

ಸಿಎಂ ಬಿಎಸ್ ವೈ ಈ ಹೇಳಿಕೆಯನ್ನ ಹಿಂಪಡೆಯಲೇಬೇಕು- ಮಾಜಿ ಸಂಸದ ಧೃವನಾರಾಯಣ್ ಒತ್ತಾಯ…

ಮೈಸೂರು,ಅಕ್ಟೋಬರ್,17,2020(www.justkannada.in): ‘ಉಪಚುನಾವಣೆಯಲ್ಲಿ ಈಗಾಗಲೇ ಗೆದ್ದಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಧೃವನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಂಸದ ಧೃವನಾರಾಯಣ್, ಸಿಎಂ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಈ ಹೇಳಿಕೆ ಸಮಂಜಸವಲ್ಲ. ಕೂಡಲೇ ಸಿಎಂ ಈ ಹೇಳಿಕೆಯನ್ನು ಹಿಂಪಡೆಯಬೇಕು. ಹಣದ ಪ್ರಯೋಗ ಅಧಿಕಾರದ ಪ್ರಯೋಗ ಹಾಗೂ ಆಪರೇಷನ್ ಕಮಲ ಮಾಡುವುದು ಹೇಗೆ ಎಂಬುದು ಬಿಎಸ್ ವೈಗೆ ಗೊತ್ತಿದೆ. ಬಿಎಸ್ವೈ ಈ ಹೇಳಿಕೆ ವಾಪಸ್ ಪಡೆಯಲೇಬೇಕು. ರಾಜ್ಯದಲ್ಲಿ  ಪಾರದರ್ಶಕವಾಗಿ ಚುನಾವಣೆ  ನಡೆಯುವಂತೆ ರಾಜ್ಯ ಚುನಾವಣಾ ಆಯೋಗ ಮನವಿ ಮಾಡುತ್ತೇವೆ ಎಂದರು.former-mp-druvanarayan-by-election-won-cm-bs-yeddyurappa-statement

ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ ಎಂಬ ಸಿ,ಟಿ ರವಿ ಹೇಳಿಕೆಗೆ ತಿರುಗೇಟು…

ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ ಎಂದು ಹೇಳಿಕೆ ನೀಡಿದ್ದ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಗೆ ತಿರುಗೇಟು ನೀಡಿರುವ ಆರ್.ಧೃವನಾರಾಯಣ್, ಈ ಮಾತು ಹೇಳುವುದಕ್ಕೆ ಸಿ.ಟಿ.ರವಿಯವರಿಗೆ ನೈತಿಕತೆ ಇಲ್ಲ. ಸಿಎಂ ಯಡಿಯೂರಪ್ಪರ ಇಬ್ಬರೂ ಮಕ್ಕಳು ರಾಜಕಾರಣದಲ್ಲಿದ್ದಾರೆ. ಒಬ್ಬ ಮಗ ಸಂಸದನಾಗಿದ್ರೆ ಇನ್ನೊಬ್ಬ ಮಗ ತಂದೆಯ ಹೆಸರಲ್ಲಿ ಅಧಿಕಾರ ನಡೆಸ್ತಿದ್ದಾರೆ. ಇಷ್ಟೇ ಸಾಕಲ್ಲವೇ ಬಿಜೆಪಿ ಪಕ್ಷದಲ್ಲೂ ಕುಟುಂಬ ರಾಜಕಾರಣ ಇದೆ ಅನ್ನೊದಕ್ಕೆ ಎಂದು ಟೀಕಿಸಿದರು.

Key words: Former mp-Druvanarayan-by-election-won-cm bs yeddyurappa-statement