Saturday, September 12, 2026

BDA Apartments

ಮೈಸೂರು: ದೇವಸ್ಥಾನಕ್ಕೆ ಕನ್ನಹಾಕಿ ನಗದು, ಚಿನ್ನಾಭರಣ ದೋಚಿದ ಖದೀಮರು… BDA JK_Adv BDA Adv
Home Crime ಮೈಸೂರು: ದೇವಸ್ಥಾನಕ್ಕೆ ಕನ್ನಹಾಕಿ ನಗದು, ಚಿನ್ನಾಭರಣ ದೋಚಿದ ಖದೀಮರು…

ಮೈಸೂರು: ದೇವಸ್ಥಾನಕ್ಕೆ ಕನ್ನಹಾಕಿ ನಗದು, ಚಿನ್ನಾಭರಣ ದೋಚಿದ ಖದೀಮರು…

ಮೈಸೂರು,ಜೂ,14,2019(www.justkannada.in): ಖದೀಮರು ದೇವಸ್ಥಾನ ಬಾಗಿಲು ಹೊಡೆದು ಹುಂಡಿಯಲ್ಲಿದ್ದ ನಗದು ಮತ್ತು ದೇಗುಲದಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಸಾಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ.

ಉದಯಗಿರಿ ಪೊಲೀಸ್ ಠಾಣೆಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.  ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಶ್ರೀ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಸ್ಥಾನದ ಬಾಗಿಲು ಹೊಡೆದು ಒಳನುಗ್ಗಿದ ದರೋಡೆಕೋರರು ಕಚೇರಿಯಲ್ಲಿರುವ  ಬೀರನ್ನ ಮೀಟಿ ಚಿನ್ನಾಭರಣ ಮತ್ತು ಹುಂಡಿಯಲ್ಲಿ ನಗದು ದೋಚಿ ಪರಾರಿಯಾಗಿದ್ದಾರೆ.

ಕಳ್ಳರು ಬಂದಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಉದಯಗಿರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Key words: Mysore- Cash -jewelery –robbed- temple