Tuesday, August 4, 2026

BDA Apartments

Home Crime ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ : ಮೈಸೂರಲ್ಲೂ 600 ಕ್ಕೂ ಹೆಚ್ಚು ದೂರು ದಾಖಲು…

ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣ : ಮೈಸೂರಲ್ಲೂ 600 ಕ್ಕೂ ಹೆಚ್ಚು ದೂರು ದಾಖಲು…

 

ಮೈಸೂರು, ಜೂ.13, 2019 : (www.justkannada.in news) ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಮನ್ಸೂರ್ ವಿರುದ್ಧ ನಗರದಲ್ಲೂ ವಂಚನೆ ದೂರು ದಾಖಲು.

ಬುಧವಾರವಷ್ಟೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಹೇಳಿಕೆ ನೀಡಿ, ಐಎಂಎ ಸಂಸ್ಥೆಯಿಂದ ವಂಚನೆಗೊಳಗಾದ ಮೈಸೂರಿಗರು ಇಲ್ಲೇ ದೂರು ನೀಡಬಹುದು ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದೂರು ನೀಡಲು ಸರದಿ ಸಾಲಿನಲ್ಲಿ ಕಾಯುತ್ತಿರುವ ಮೋಸ ಹೋದವರು.
ಈ ಸಂಬಂಧ ನಗರದ ಉದಯಗಿರಿ ಪೊಲೀಸ್ ರಿಂದ ದೂರು ಸ್ವೀಕಾರ. ೬೦೦ ಕ್ಕೂ ಹೆಚ್ಚು ಮಂದಿ ದೂರು ದಾಖಲಿಸಿದ ವಂಚನೆಗೆ ಒಳಗಾದವರು. ಅಂದಾಜು ಸುಮಾರು ೧೦ ಕೋಟಿ ರೂ. ಗೂ ಹೆಚ್ಚು ಹಣ ವಂಚನೆ ನಡೆದಿದೆ ಎಂಬ ಆರೋಪ.
ಜಿಲ್ಲೆಯ ಟಿ.ನರಸೀಪುರ, ಕೆ.ಆರ್.ನಗರ ದಿಂದಲೂ ಆಗಮಿಸಿ ದೂರು ದಾಖಲು ಮಾಡಿದ ಸದಸ್ಯರು. ಉದಯಗಿರಿಯ ಜಬ್ಬಾರ್ ಹಾಲ್ ನಲ್ಲಿ ದೂರು ಸ್ವೀಕರಿಸುತ್ತಿರುವ ಉದಯಗಿರಿ ಠಾಣಾ ಪೊಲೀಸರು.

—-

key words : mysore-ima-froud-complaint-police