Sunday, October 4, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ದಸರಾ 2020: ಭಾರ ಹೊರುವ ತಾಲೀಮು ಆರಂಭಿಸಿದ ಅಭಿಮನ್ಯು ಆ್ಯಂಡ್ ಟೀಂ

ದಸರಾ 2020: ಭಾರ ಹೊರುವ ತಾಲೀಮು ಆರಂಭಿಸಿದ ಅಭಿಮನ್ಯು ಆ್ಯಂಡ್ ಟೀಂ

ಮೈಸೂರು, ಅಕ್ಟೋಬರ್ 09, 2020 (www.justkannada.in): ದಸರಾ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭವಾಗಿದೆ.

ಗಜಪಡೆ ಕ್ಯಾಪ್ಟನ್‌ ಅಭಿಮನ್ಯು ಜತೆ ವಿಜಯ ಆನೆ ಸುಮಾರು 350 ಕೆ.ಜಿ ಭಾರ ಹೊತ್ತು ಸಾಗಿತು. ಕೋವಿಡ್‌ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲೇ ತಾಲೀಮು ನಡೆಯುತ್ತಿದೆ.

ಬೆಳಗ್ಗೆ ಐದೂ ಆನೆಗಳು ಅರಮನೆ ಸುತ್ತ ಎರಡು ಸುತ್ತು ಬಂದವು. ಸುಮಾರು ಮೂರು ಕಿ.ಮೀ ಹೆಜ್ಜೆ ಹಾಕಿದವು. ವಿಕ್ರಮ, ಗೋಪಿ, ವಿಜಯಾ, ಕಾವೇರಿ ಆನೆಗಳು ತಾಲೀಮಿನಲ್ಲಿ ಭಾಗಿಯಾಗಿದ್ದವು.

54 ವರ್ಷದ ಅಭಿಮನ್ಯು ಇದೇ ಮೊದಲ ಬಾರಿ ಅಂಬಾರಿ ಹೊರಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಮರಳು ಮೂಟೆ ಹೊರಿಸಿ ತಾಲೀಮು ನಡೆಸಲಾ ಗುತ್ತಿದೆ. ಅ.26ರಂದು ನಾಡದೇವತೆ ಚಾಮುಂಡೇಶ್ವರಿ ತಾಯಿ ವಿರಾಜಮಾ ನವಾಗಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದೆ.