ರೈತ ಮುಖಂಡರ ಜತೆ ಸಿಎಂ ಬಿಎಸ್ ವೈ ಮಾತುಕತೆ ವಿಫಲ…

ಬೆಂಗಳೂರು,ಸೆಪ್ಟಂಬರ್,25,2020(www.justkannada.in): ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆ ಸೆಪ್ಟಂಬರ್ 28 ರಂದು ಕರ್ನಾಟಕ ಬಂದ್ ಕರೆ ನೀಡಿದ್ದು ಈ ಹಿನ್ನೆಲೆ ಇಂದು ರೈತ ಮುಖಂಡರ ಜತೆ ಸಿಎಂ ಬಿಎಸ್ ಯಡಿಯೂರಪ್ಪ ನಡೆಸಿದ ಮಾತುಕತೆ ವಿಫಲವಾಗಿದೆ.jk-logo-justkannada-logo

ಕಾಯ್ದೆಯಲ್ಲಿ ಬದಲಾವಣೆ ಮಾಡಲು ಒಪ್ಪದ ಸಿಎಂ ಯಡಿಯೂರಪ್ಪ, ರೈತ ಮುಖಂಡರನ್ನೇ ಮನವರಿಕೆ ಮಾಡಲು ಪ್ರಯತ್ನ ಮಾಡಿದರು. ಜಮೀನು ಹೊಂದುವ ಮಿತಿ ಕಡಿಮೆ ಮಾಡುವ ಬಗ್ಗೆ ಸಿಎಂ ಭರವಸೆ ನೀಡಿದರಾದರೂ, ಸಿಎಂ ಬಿಎಸ್ ವೈ ಮಾತಿಗೆ ಒಪ್ಪದ  ರೈತ ಮುಖಂಡರು ಸೆ. 28 ಕರ್ನಾಟಕ ಬಂದ್ ಗೆ  ನಿರ್ಧರಿಸಿದ್ದಾರೆ.

ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆ ತಿದ್ಧುಪಡಿ ವಿರೋಧಿಸಿ ಇಂದು ರೈತರು ರಾಜ್ಯಾದ್ಯಂತ ರಾಜ್ಯ, ರಾಷ್ಟ್ರ ಹೆದ್ಧಾರಿ ತಡೆದು ಪ್ರತಿಭಟನೆ ನಡೆಸಿದರು. ಈ ನಡುವೆ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.apmc-land-reform-amendment-act-cm-bs-yeddyurappa-meeting-farmer-leader

ರೈತರ ಪ್ರತಿಭಟನೆ ಹಿನ್ನೆಲೆ ಈ ಬಗ್ಗೆ ಮಾತುಕತೆಗೆ ಸಿಎಂ ಬಿಎಸ್ ಯಡಿಯೂರಪ್ಪ ರೈತ ಮುಖಂಡರನ್ನ ಆಹ್ವಾನಿಸಿ ರೈತಮುಖಂಡರ ಜತೆ ಮಾತುಕತೆ ನಡೆಸಿದರು. ಆದರೆ ಸಿಎಂ ಮಾತುಕತೆ ವಿಫಲವಾಗಿದ್ದು ಸೆಪ್ಟಂಬರ್ 28 ರಂದು ಕರ್ನಾಟಕ ಬಂದ್ ಗೆ ನಿರ್ಧರಿಸಿದ್ದಾರೆ.

 

Key words: APMC- Land Reform Amendment Act- CM bs yeddyurappa-meeting-farmer leader