ಬೆಂಗಳೂರು, ಸೆಪ್ಟೆಂಬರ್ 24, 2020 (www.justkannada.in): ಈಗ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಚಿತ್ರತಂಡ ಮತ್ತೆ ಕೆಲಸ ಆರಂಭಿಸಿದೆ.
ಚಿತ್ರದ ಎರಡನೇ ಶೆಡ್ಯೂಲ್ನ ಚಿತ್ರೀಕರಣ ಇಟಲಿಯಲ್ಲಿ ನಡೆಯಲಿದೆಯಂತೆ. 15 ದಿನಗಳ ಕಾಲ ಈ ಶೂಟಿಂಗ್ ನಡೆಯಲಿದ್ದು, ಸದ್ಯದಲ್ಲೇ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಈ ಸಿನಿಮಾ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ. ಮುರಳಿ ಶರ್ಮಾ, ಪ್ರಿಯದರ್ಶಿನಿ ಹಾಗೂ ಕಾಲಿವುಡ್ ಹಾಸ್ಯ ನಟ ಸತ್ಯಂ ತಾರಾಗಣದಲ್ಲಿದ್ದಾರೆ.
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್ ಚಿತ್ರ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟಿಸಿದೆ.
            





