Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಕೃಷಿಕರ ಪರ ಕೇಂದ್ರದ ಕಾಯಿದೆ ಅಭಿನಂದನೀಯ – ಕೃಷಿ ಸಚಿವ ಬಿ.ಸಿ.ಪಾಟೀಲ್

ಕೃಷಿಕರ ಪರ ಕೇಂದ್ರದ ಕಾಯಿದೆ ಅಭಿನಂದನೀಯ – ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರು,ಸೆಪ್ಟೆಂಬರ್,22,2020(www.justkannada.in) : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರ ಕೃಷಿಕರ ಪರವಾಗಿ ಮಸೂದೆಗಳನ್ನು ಮಂಡಿಸಿರುವುದು ಐತಿಹಾಸಿಕ ಮತ್ತು ಅಭಿನಂದನೀಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.jk-logo-justkannada-logoವಿಧಾನಸೌಧ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಸಾಧ್ಯವಾಗಿದ್ದು, ರೈತರ ಮನೆಬಾಗಿಲಿಗೆ ಹೋಗಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ ಎಂದರು.

ಅಂದಮಾತ್ರಕ್ಕೆ ಎಪಿಎಂಸಿಯಲ್ಲಿ ಮಾರಾಟ ನಿಲ್ಲಿಸಲ್ಲ. ಎಪಿಎಂಸಿಗೆ ಗೊತ್ತಿಲ್ಲದೇ ಮಧ್ಯವರ್ತಿಗಳ ಹಾವಳಿಯಿಂದಾಗುವ ತೊಂದರೆ ತಪ್ಪಿದೆ. ಪಂಜಾಬ್ ‌ಗನುಗುಣವಾಗಿ ಅಕಾಲಿಕ ದಳ ತೆಗೆದುಕೊಂಡ ನಿರ್ಧಾರ ಅವರ ವೈಯಕ್ತಿಕ ಎಂದು ಹೇಳಿದರು.

Farmers-Programs-Act-Appreciation-Agriculture-Minister-B.C.Patil

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, 26 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಯಾವುದೇ ರೈತರು ಎಪಿಎಂಸಿ ಆ್ಯಕ್ಟ್ ವಿರೋಧಿಸಿಲ್ಲ. ರೈತನ ಬೆಳೆ ಮಾರಾಟ ಅವನ ಹಕ್ಕು. ಮೊದಲಿದ್ದ ಮಾರಾಟದ ನಿಯಮವನ್ನು ಕೇಂದ್ರ ಸಡಿಲಿಸಿದೆ ಎಂದರು.

ವಿಪಕ್ಷಗಳು ಕೇವಲ ರಾಜಕೀಯಕ್ಕಾಗಿ ಮಾತ್ರ ವಿರೋಧಿಸುತ್ತಿದೆ..

ರೈತರಿಗಾಗಿ ಎಪಿಎಂಸಿ ಸೆಸ್ ಕೂಡ ಕಡಿಮೆ ಮಾಡಿದೆ. ಈ ಕಾನೂನು ಬಂದ ಮೇಲೆ ಹೊಲದಲ್ಲಿಯೇ ಹೋಗಿ ಕೂಡ ಬೆಳೆ ಖರೀದಿಸಬಹುದು. ಈ ಕಾನೂನು ಆದ ಮೇಲೆ ಎಲ್ಲಾ ಎಪಿಎಂಸಿಗೆ ಭೇಟಿ ಕೊಟ್ಟಿದ್ದೇವೆ. ಯಾರೂ ವಿರೋಧಿಸುತ್ತಿಲ್ಲ. ವಿಪಕ್ಷಗಳು ಕೇವಲ ರಾಜಕೀಯಕ್ಕಾಗಿ ಮಾತ್ರ ವಿರೋಧಿಸುತ್ತಿದೆ. ರೈತನಿಗೆ ಮುಕ್ತವಾದ ವಾತಾವರಣ ಈ ಕಾಯಿದೆಯಿಂದ ಸಿಕ್ಕಿ ನನ್ನ ಬೆಳೆ ನನ್ನ ಹಕ್ಕು ಎನ್ನುವಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರೈತರು ಮಲ್ಟಿನ್ಯಾಷನಲ್ ಕಂಪೆನಿಗಳು ಅಥವಾ ಯಾರಿಗೆ ಮಾರಾಟ ಮಾಡಲಿ. ರೈತನ ಬೆಳೆಗೆ ಬೆಲೆ ಸಿಗಬೇಕು. ಆದಾಯ ಹೆಚ್ಚಾಗಬೇಕು. ಪ್ರತಿಭಟನೆ ಹತ್ತಿಕ್ಕುವ ಕೆಲಸ ನಮ್ಮ ಸರ್ಕಾರ ಮಾಡುತ್ತಿಲ್ಲ. ಅಮೆಂಡ್ಮೆಂಟ್ ತಂದಗಾಲೇ ವಿರೋಧಿಸಿಲ್ಲ ಏಕೆ ಎಂದು ಪ್ರಶ್ನಿಸಿದರು.  ಸರ್ಕಾರ ಸ್ಪಂದಿಸಲು ಪ್ರತಿಭಟನಾನಿರತರನ್ನು ಭೇಟಿ ಮಾಡಲು ಮುಖ್ಯಮಂತ್ರಿಗಳು ಸಿದ್ಧರಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ರೈತರು ಎಪಿಎಂಸಿಗೆ ಹೋಗಿ ಮಾರಾಟ ಮಾಡುವ ಸೀಮಿತ ಕಾಲಾವಧಿಯನ್ನು ಹಾಗೂ ಮಾರಾಟದ ಅವಕಾಶವನ್ನು ವಿಸ್ತರಿಸಲಾಗಿದೆ. ಲೋಡಿಂಗ್ ಅನ್ಲೋಡಿಂಗ್, ಹಮಾಲಿ ಕೂಲಿ ಖರ್ಚು ಕಡಿಮೆಯಾಗಲಿದೆ. ಇಂತಹ ರೈತ ಪರ ಕಾಯಿದೆ ತಂದಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಈ ಕಾಯ್ದೆಯಿಂದ ರೈತರಲ್ಲಿ ಸ್ಪರ್ಧಾ ಮನೋಭಾವ ಹುಟ್ಟಿ ಉತ್ತಮ ಫಸಲನ್ನು ಬೆಳೆಯಲು ಅವಕಾಶವಾಗಲಿದೆ. ಕೃಷಿ ಪದವೀಧರರು, ಸಾಫ್ಟ್ ಅಗ್ರಿಗಳು ಹಾರ್ಡ್ ಅಗ್ರಿಯತ್ತ ಆಸಕ್ತರಾಗಲಿದ್ದಾರೆ. ಕೃಷಿಕರ ಸಂಖ್ಯೆಯೂ ಈಗ ಹೆಚ್ಚಾಗಿದೆ. ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಬಹುದು. ಇದರಿಂದ ಉತ್ತಮ ಗುಣಮಟ್ಟದ ಬೆಳೆ ಬೆಳೆಯಬಹುದು‌.ಯಂತ್ರೋಪಕರಣಗಳಿಗಾಗಿ ಒಪ್ಪಂದ ಮಾಡಿಕೊಳ್ಳಬಹುದು‌. ಜಮೀನಿನ ವಿಷಯದಲ್ಲಿ ಈ ಒಪ್ಪಂದವಲ್ಲ ಎಂದು ವಿವರಿಸಿದರು.

ಸ್ವಾಮಿನಾಥನ್ ವರದಿ ತಂದಿದ್ದು ಮೋದಿ ಸರ್ಕಾರ

ಬೆಳೆಗಳಿಗಾಗಿ ಒಪ್ಪಂದ‌. ಸ್ವಾಮಿನಾಥನ್ ವರದಿ ತಂದಿದ್ದು ಮೋದಿ ಸರ್ಕಾರ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ಲಾಭವಾಗಲಿದೆ. ರೈತರಿಗೆ ದೊಡ್ಡಪ್ರಮಾಣದಲ್ಲಿ ಲಾಭವಾಗಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿಯೂ ರಾಗಿ ಖರೀದಿಯಾಗುತ್ತಿದೆ. ಈ ಕಾಯಿದೆಯಿಂದ ಮಧ್ಯವರ್ತಿಗಳಿಗಷ್ಟೆ ತೊಂದರೆ. ದಳ್ಳಾಳ್ಳಿಗಳೊಂದಿಗೆ ಸಹಕರಿಸುತ್ತಿರುವವರಿಗೆ ತೊಂದರೆ. ಈ ಪ್ರತಿಭಟನೆ ರೈತರದ್ದಲ್ಲ. ರೈತ ಹೋರಾಟಗಾರರದ್ದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್ ಉಪಸ್ಥಿತರಿದ್ದರು.

key words : Farmers-Programs-Act-Appreciation-Agriculture-Minister-B.C.Patil