Friday, August 14, 2026

BDA Apartments

Home Front Page ರೈಲ್ವೆ ಆಸ್ಪತ್ರೆ ವೈದ್ಯರ ವರ್ಗಾವಣೆ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ…..

ರೈಲ್ವೆ ಆಸ್ಪತ್ರೆ ವೈದ್ಯರ ವರ್ಗಾವಣೆ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ…..

ಮೈಸೂರು,ಮೇ,2,2019(www.justkannada.in): ಮೈಸೂರಿನ ರೈಲ್ವೆ ಆಸ್ಪತ್ರೆ ವೈದ್ಯರ ವರ್ಗಾವಣೆ ಖಂಡಿಸಿ ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನಲ್ಲಿರುವ ಒಂಟಿಕೊಪ್ಪಲಿನಲ್ಲಿರುವ ರೈಲ್ವೆ ಆಸ್ಪತ್ರೆ ಎದುರು  ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.  ರೈಲ್ವೆ ಆಸ್ಪತ್ರೆ ವೈದ್ಯರಾರದ ಡಾ.ಶಿವಕುಮಾರ್ ಮತ್ತು ಶೋಭಾ ಅವರು ಹುಬ್ಬಳ್ಳಿ ಸೆಂಟ್ರಲ್ ರೈಲ್ವೆ ಆಸ್ಪತ್ರೆಗೆ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ  ಡಾ.ಶಿವಕುಮಾರ್ ಮತ್ತು ಶೋಭಾ ವರ್ಗಾವಣೆ ಹಿಂಪಡೆಯುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರೈಲ್ವೆ  ವರ್ಕಶಾಪ್ ಯೂನಿಯನ್ ಅಧ್ಯಕ್ಷ ಯತಿರಾಜ್, ವೈದ್ಯರ ವರ್ಗಾವಣೆ ಹಿಂಪಡೆಯುವಂತೆ ಒತ್ತಾಯಿಸಿ ವೈದ್ಯಕೀಯ ವಿಭಾಗದ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಗಿದೆ.  ಉತ್ತಮ ಸೇವಾ ಮನೋಭಾವನೆ ಹೊಂದಿರುವ ವೈದ್ಯರ ವರ್ಗಾವಣೆ ಸರಿಯಲ್ಲ. ದಕ್ಷ ಮತ್ತು ಪ್ರಾಮಾಣಿಕ ವೈದ್ಯರನ್ನ ಇಲ್ಲೇ ಮುಂದುವರೆಸಬೇಕೆಂದು ಒತ್ತಾಯಿಸುತ್ತೇವೆ ವರ್ಗಾವಣೆ ಆದೇಶ ಹಿಂಪಡೆಯದಿದ್ದರೆ  ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.

Key words: Protest –Mysore- condemns -transfer -railway hospital -doctors