Friday, August 14, 2026

BDA Apartments

Home Cinema ಗಿರೀಶ್ ಕಾರ್ನಾಡ್ ಗೆ ಸಂತಾಪ ಸೂಚಿಸಲು ಸೋಷಿಯಲ್ ಮೀಡಿಯಾಗೆ ಹಿಂದಿರುಗಿದ ಶೃತಿ ಹರಿಹರನ್ !

ಗಿರೀಶ್ ಕಾರ್ನಾಡ್ ಗೆ ಸಂತಾಪ ಸೂಚಿಸಲು ಸೋಷಿಯಲ್ ಮೀಡಿಯಾಗೆ ಹಿಂದಿರುಗಿದ ಶೃತಿ ಹರಿಹರನ್ !

ಬೆಂಗಳೂರು, ಜೂನ್ 11, 2019 (www.justkannada.in): ನಟಿ ಶೃತಿ ಹರಿಹರನ್ ಮತ್ತೆ ಸೋಷಿಯಲ್ ಮೀಡಿಯಾಗೆ ವಾಪಸ್ ಬಂದಿದ್ದಾರೆ.

ಗಿರೀಶ್ ಕಾರ್ನಾಡರಿಗೆ ಸಂತಾಪ ಸೂಚಿಸುವ ಸಲುವಾಗಿ ಮತ್ತೆ ಸೋಷಲ್ ಮೀಡಿ ಯಾಗೆ ಬಂದಿದ್ದಾರೆ ನಟಿ ಶ್ರುತಿ ಹರಿಹರನ್. ಬಹಳ ಸಮಯಗಳ ಕಾಲ ಸೋಷಲ್ ಮೀಡಿಯಾದಿಂದ ದೂರವೇ ಉಳಿದಿದ್ದ ನಟಿ, ಗಿರೀಶ್ ಕಾರ್ನಾಡ್ ನಿಧನದ ಸಲುವಾಗಿಯೇ ವಾಪಸ್ ಬಂದಿದ್ದಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ನಿಜವಾದ ಲೆಜೆಂಡ್‌ಗೆ ಸಂತಾಪ ಸೂಚಿಸುವ ಕಾರಣದಿಂದಲೇ ಬಹಳ ಸಮಯದ ನಂತರ ಮತ್ತೆ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದೇನೆ. ಅವರ ಜೊತೆ ಕೆಲಸ ಮಾಡುವ ಅದೃಷ್ಟ ಒಂದೇ ಒಂದು ಸಲ ನನಗೆ ದೊರಕಿತ್ತು. ಅವರ ಸರಳತೆ ಮತ್ತು ಬುದ್ಧಿವಂತಿಕೆ ನಿಜಕ್ಕೂ ನಮ್ಮಲ್ಲಿ ಅಚ್ಚರಿ ಮತ್ತು ಗಾಬರಿಯನ್ನು ಒಟ್ಟೊಟ್ಟಿಗೆ ಉಂಟು ಮಾಡುತ್ತದೆ. ಅವರು ನಮ್ಮ ಹೃದಯಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದು ಶ್ರುತಿ ಹೇಳಿದ್ದಾರೆ.