Friday, August 21, 2026

BDA Apartments

Home Crime ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ: 2.1 ಕೆ.ಜಿ ಗಾಂಜಾ ವಶ…

ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ: 2.1 ಕೆ.ಜಿ ಗಾಂಜಾ ವಶ…

ಬೆಂಗಳೂರು, ಸೆಪ್ಟೆಂಬರ್,11,2020(www.justkannada.in) : ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, 2.1 ಕೆ.ಜಿ ತೂಕದ ಗಾಂಜಾವನ್ನು ಬಾಗಲಗುಂಟೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

jk-logo-justkannada-logo

ಬೆಂಗಳೂರು ನಗರದ ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನ ಮಲ್ಲಸಂದ್ರ ಗುಟ್ಟೆಯ ಮಲ್ಲಿಕಾರ್ಜುನ ದೇವಸ್ಥಾನದ ರಸ್ತೆ ಹಾಗೂ ಡೋಬಿಘಾಟ್ ಮುಂಭಾಗದ ರಸ್ತೆಯ ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ಇಬ್ಬರು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

selling-drugs-Arrest-two-2.1 kg-marijuana-possession

ಟಿ.ದಾಸರಹಳ್ಳಿ ವಿನಯ್(24), ಪ್ರಶಾಂತ್ ನಗರದ ಎಸ್.ಅಖಿಲ್(22) ಇಬ್ಬರನ್ನು ದಸ್ತಗಿರಿ ಮಾಡಿದ್ದು, 2.1 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬೆಂಗಳೂರು ನಗರದ ಉಲ್ಲಾಳ ಉಪನಗರದಲ್ಲಿನ ಮುಸ್ಲಿಂ ಕಾಲೋನಿಯ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ತಮಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು, ತಾವು ಈ ಗಾಂಜಾವನ್ನು ಹೆಚ್ಚಿನ ಬೆಲೆಗೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.

ಈ ಪ್ರಕರಣವನ್ನು ಯಶವಂತಪುರ ಉಪ ವಿಭಾಗ ಎನ್.ಟಿ.ಶ್ರೀನಿವಾಸರೆಡ್ಡಿ ಅವರ ಮಾರ್ಗದರ್ಶನದಲ್ಲಿ ಇನ್ ಸ್ಪೆಕ್ಟರ್ ವೆಂಕಟೇಶ್ ಗೌಡ ಹಾಗೂ ಇತರೆ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

key words : selling-drugs-Arrest-two-2.1 kg-marijuana-possession