Sunday, September 13, 2026

BDA Apartments

ಲೋಕಲ್ ವಾರ್ : ಬಿಜೆಪಿ ಕಾರ್ಯಕರ್ತರಿಗೆ ಕರೆಕೊಟ್ಟ ಮೈಸೂರು ಜಿಲ್ಲಾ ಉಸ್ತುವಾರ...
Home Front Page ಲೋಕಲ್ ವಾರ್ : ಬಿಜೆಪಿ ಕಾರ್ಯಕರ್ತರಿಗೆ ಕರೆಕೊಟ್ಟ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್…

ಲೋಕಲ್ ವಾರ್ : ಬಿಜೆಪಿ ಕಾರ್ಯಕರ್ತರಿಗೆ ಕರೆಕೊಟ್ಟ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು, ಸೆಪ್ಟಂಬರ್,4,2020(www.justkannada.in): ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಜ್ಜಾಗಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಕರೆ ನೀಡಿದರು.jk-logo-justkannada-logo

ಗ್ರಾಮಪಂಚಾಯತ್  ಚುನಾವಣೆ ಮುಂದಿಟ್ಟುಕೊಂಡೇ ಸಚಿವ ಸೋಮಶೇಖರ್  ಹಾಗೂ ಸಂಸದ ಪ್ರತಾಪ್‌ ಸಿಂಹ  ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು ಇಂದು ಕೆ. ಆರ್ ನಗರ ಮತ್ತು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿ ಚರ್ಚಿಸಿದರು.

ಇದೇ ವೇಳೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಮುಂಬರುವ ಗ್ರಾ.ಪಂ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಜ್ಜಾಗಿ. ಗ್ರಾಮ ಪಂಚಾಯತ್ ನಿಂದ ಹಿಡಿದು  ಜಿಲ್ಲಾ ಪಂಚಾಯತ್ ನವರೆಗೂ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಆಗಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.grama-panchayath-election-mysore-minister-st-somashekar-bjp-worker

ಹಾಗೆಯೇ ಗ್ರಾಮ ಪಂಚಾಯತ್ ವಿಚಾರ ಕೋರ್ಟ್ ನಲ್ಲಿದೆ. ಯಾವಾಗಲಾದರೂ ಚುನಾವಣೆ ಬರಬಹುದು. ನೀವು ಇಂದಿನಿಂದಲೇ ತಯಾರಾಗಿ ಎಂದು ಕಾರ್ಯಕರ್ತರಿಗೆ ಸಚಿವ  ಸೋಮಶೇಖರ್ ಕರೆ ನೀಡಿದರು.

Key words: grama panchayath -election-mysore-minister – ST Somashekar-bjp – worker