Friday, August 14, 2026

BDA Apartments

Home Front Page ಕೇರಳದ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ: ತಾವರೆ ಹೂವಿನಿಂದ ತುಲಭಾರ ಸೇವೆ…

ಕೇರಳದ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ: ತಾವರೆ ಹೂವಿನಿಂದ ತುಲಭಾರ ಸೇವೆ…

ಕೇರಳಾ,ಜೂ,8,2019(www.justkannada.in)  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇರಳಾದ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಶ್ರೀಲಂಕಾ, ಮಾಲ್ಡೀವ್ಸ್ ಗೆ ಪ್ರಧಾನಿ ನರೇಂದ್ರ ಮೋದಿ  ಪ್ರವಾಸ ಕೈಗೊಂಡಿದ್ದು, ಅದಕ್ಕೂ ಮುನ್ನ ಕೇರಳಾದ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನದಲ್ಲಿ ಒಂದು ಗಂಟೆಗಳ ಕಾಲ ಇರಲಿರುವ ಪ್ರಧಾನಿ ಮೋದಿ ದೇಗುಲದಲ್ಲಿ ತಾವರೆ ಹೂವಿನಿಂದ ತುಲಭಾರ ಸೇವೆ ಮಾಡಲಿದ್ದಾರೆ.

ತುಲಭಾರ ಸೇವೆಗಾಗಿ ತಮಿಳುನಾಡಿ ನಾಗರಕೊಯಿಲ್ ನಿಂದ 112 ಕೆಜಿ ತಾವರೆಹೂವನ್ನ ತರಿಸಲಾಗಿದೆ. ಪ್ರಧಾನಿ ಮೋದಿ 2008ರಲ್ಲೂ ಇದೇ ದೇವಸ್ಥಾನದಲ್ಲಿ ತುಲಭಾರ ಸೇವೆ ಮಾಡಿದ್ದರು.

Keywords: Prime Minister Narendra Modi visits Sri Krishna Temple in Guruvayur, Kerala.

#Narendra Modi #visits #SriKrishnaTemple #Guruvayur #Kerala.