Thursday, August 13, 2026

BDA Apartments

Home Front Page ಶುದ್ಧ ಕುಡಿಯುವ ನೀರು ದರ ಹೆಚ್ಚಳಕ್ಕೆ ವಿರೋಧ: ಸಿಎಂ ಹೆಚ್.ಡಿಕೆ, ಸಚಿವ ಕೃಷ್ಣಬೈರೇಗೌಡರಿಗೆ ಪತ್ರ ಬರೆದ...

ಶುದ್ಧ ಕುಡಿಯುವ ನೀರು ದರ ಹೆಚ್ಚಳಕ್ಕೆ ವಿರೋಧ: ಸಿಎಂ ಹೆಚ್.ಡಿಕೆ, ಸಚಿವ ಕೃಷ್ಣಬೈರೇಗೌಡರಿಗೆ ಪತ್ರ ಬರೆದ ಹೆಚ್.ಕೆ ಪಾಟೀಲ್…

ಬೆಂಗಳೂರು,ಜೂ,8,2019(www.justkannada.in): ಶುದ್ದ ಕುಡಿಯುವ ನೀರಿನ ಧರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ ಪಾಟೀಲ್  ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಚಿವ ಕೃಷ್ಣೇಭೈರೇಗೌಡರಿಗೆ  ಪತ್ರ ಬರೆದಿದ್ದಾರೆ.

ಈ ಬಗ್ಗೆ ಪತ್ರ ಬರೆದಿರುವ ಹೆಚ್.ಕೆ ಪಾಟೀಲ್, ಶುದ್ಙ ಕುಡಿಯುವ ನೀರಿನ ದರ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.  ಒಂದು ಲೀಟರ್ ನೀರಿನ ದರ 10 ಪೈಸೆಯಿಂದ 25 ಪೈಸೆಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.  ಇದ್ದು ನಮ್ಮ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದದ್ದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಮ್ಮದು ಬಡವರ ಪರ ಪಕ್ಷ. ಹೀಗಾಗಿ ಬಡವರಿಗೆ ಉಚಿತ ಅಕ್ಕಿ, ಊಟ ನೀಡಿದೆ. ಈಗ ಶುದ್ಧಕುಡಿಯುವ ನೀರಿನ ದರ ಹೆಚ್ಚಿಸಿರುವುದು ನನಗೆ ಬೇಸರ ತರಿಸಿದೆ ಎಂದು ಪತ್ರದಲ್ಲಿ ಹೆಚ್.ಕೆ ಪಾಟೀಲ್ ಉಲ್ಲೇಖಿಸಿದ್ದಾರೆ.

Key words: Opposition to increasing clean drinking water rates. HK Patil wrote a letter to CM HD kumaraswamy…

#Opposition #drinking water #rates. #HKPatil #CM HD kumaraswamy…