Friday, August 21, 2026

BDA Apartments

Home Front Page ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಆಟೋ ಚಾಲಕನ ಮಗಳಿಗೆ ಸನ್ಮಾನ…

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಆಟೋ ಚಾಲಕನ ಮಗಳಿಗೆ ಸನ್ಮಾನ…

ಮೈಸೂರು,ಆ,12,2020(www.justkannada.in):  ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಆಟೋ ಚಾಲಕನ ಮಗಳಿಗೆ ಆಟೋ ಚಾಲಕರು ಸನ್ಮಾನ ಮಾಡಿದರು.sslc-auto-driver-daughter-score-best-thanked-mysore

ಟಿ.ನರಸೀಪುರ ತಾಲೂಕಿನ ಎಡದೊರೆ ಗ್ರಾಮದ ಸರ್ಕಾರಿ ಹಿರಿಯ ಫ್ರೌಡಶಾಲೆಯ ವಿದ್ಯಾರ್ಥಿನಿ ಛಾಯಾದೇವಿ ಎಸ್ ಎಸ್ ಎಲ್ ಸಿ ಪರಿಕ್ಷೇಯಲ್ಲಿ  ಕನ್ನಡ-119, ಇಂಗ್ಲಿಷ್-75, ಹಿಂದಿ-99, ಗಣಿತ-75, ವಿಜ್ಞಾನ-81, ಸಮಾಜ ವಿಜ್ಞಾನ 95, 625ಕ್ಕೆ 545 ಅಂಕ ಗಳಿಸುವ ಮೂಲಕ‌ ಶೇ.87 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದು  ವಿದ್ಯಾರ್ಥಿನಿ ಛಾಯಾದೇವಿಗೆ ಆಟೋ ಚಾಲಕರ ಕಡೆಯಿಂದ ಸನ್ಮಾನ ಮಾಡಲಾಯಿತು.

ಛಾಯಾದೇವಿ ತಾಲೂಕಿನ ಗುಂಜಾ ನರಸಿಂಹಸ್ವಾಮಿ ಆಟೊ ಚಾಲಕರ ಸಂಘದ ಸದಸ್ಯ ನಾಗಣ್ಣ ಅವರ ಮಗಳಾಗಿದ್ದು ಸಂಘದ ಅಧ್ಯಕ್ಷ ಮಣಿಕಂಠ‌ ರಾಜು‌ಗೌಡ ಅವರು ಛಾಯಾದೇವಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದರು. ವಿದ್ಯಾಭ್ಯಾಸಕ್ಕೆ ಸಹಾಯಹಸ್ತ ಚಾಚಲು ಆಟೋ ಚಾಲಕರು ಮುಂದಾಗಿದ್ದಾರೆ.

Key words: SSLC -auto driver – daughter – score- best –thanked-mysore