Saturday, September 12, 2026

BDA Apartments

ಗಲಭೆ ಪೂರ್ವಯೋಜಿತ: ಕಠಿಣ ಕ್ರಮಕ್ಕೆ ಆಗ್ರಹಿಸಿದ ಸಚಿವ ಸಿ.ಟಿ ರವಿ… BDA JK_Adv BDA Adv
Home Front Page ಗಲಭೆ ಪೂರ್ವಯೋಜಿತ: ಕಠಿಣ ಕ್ರಮಕ್ಕೆ ಆಗ್ರಹಿಸಿದ ಸಚಿವ ಸಿ.ಟಿ ರವಿ…

ಗಲಭೆ ಪೂರ್ವಯೋಜಿತ: ಕಠಿಣ ಕ್ರಮಕ್ಕೆ ಆಗ್ರಹಿಸಿದ ಸಚಿವ ಸಿ.ಟಿ ರವಿ…

ಬೆಂಗಳೂರು,ಆ,11,2020(www.justkannada.in):  ಬೆಂಗಳೂರಿನ ಡಿ.ಜೆ ಹಳ್ಳಿ ಕೆ.ಜಿ ಹಳ್ಳಿ ಗಲಭೆ ಪ್ರಕರಣವನ್ನ ಖಂಡಿಸಿರುವ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.jk-logo-justkannada-logo

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸಿ.ಟಿ ರವಿ, ಡಿ.ಜೆ ಹಳ್ಳಿ ಗಲಭೆ ಪ್ರಕರಣವನ್ನು ಖಂಡಿಸುತ್ತೇನೆ. ಪತ್ರಕರ್ತರು, ಪೊಲೀಸರು, ಅಮಾಯಕ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಪೂರ್ವಯೋಜಿತ ಎಂಬಂತೆ ಕಾಣಿಸುತ್ತದೆ.

ಕಲ್ಲು, ದೊಣ್ಣೆ, ಪೆಟ್ರೋಲ್ ಬಾಂಬ್ ಗಲಭೆಕೋರರಿಗೆ ಬಂದಿದ್ದೆಲ್ಲಿಂದ…? ಗಲಭೆ ಪೂರ್ವಯೋಜಿತ, ಗಲಭೆ ನಡೆಸುವವರಿಗೆ ಒಂದು ನೆಪ ಬೇಕಿತ್ತು. ಇವರುಗಳನ್ನು ಬೇರು ಸಹಿತ ಮಟ್ಟ ಹಾಕಲೇಬೇಕು ಎಂದು ಹೇಳಿದ್ದಾರೆ.Bangalore-dj halli-Riot – preplan-Minister- CT Ravi.

ಡಿ.ಜೆ ಹಳ್ಳಿ ಗಲಭೆ ಪ್ರಕರಣ, ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವರಿಗೆ ತಾವು ಕಾನೂನನ್ನು ಮೀರಿದವರು ಎಂಬ ಭಾವನೆಯಿದೆ. ಇದು ಏಳು ದಶಕಗಳ ಓಲೈಕೆ ರಾಜಕಾರಣದ ಪರಿಣಾಮ ಎಂದು ಸಚಿವ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.

Key words: Bangalore-dj halli-Riot – preplan-Minister- CT Ravi.