Wednesday, August 12, 2026

BDA Apartments

Home Front Page ಈ ಸಾಲಿನ ಐಪಿಎಲ್’ಗೆ ವಿವೊ ಪ್ರಾಯೋಜಕತ್ವ ಇಲ್ಲ

ಈ ಸಾಲಿನ ಐಪಿಎಲ್’ಗೆ ವಿವೊ ಪ್ರಾಯೋಜಕತ್ವ ಇಲ್ಲ

ಮುಂಬೈ, 06, 2020 (www.justkannada.in): ಈ ಸಾಲಿನ ಐಪಿಎಲ್ ಪಂದ್ಯಾವಳಿಗೆ ವಿವೋ ಸ್ಪಾನ್ಸರ್ ಶಿಪ್ ಇರುವುದಿಲ್ಲ.

ಹೌದು. ಇಂಡಿಯನ್ ಪ್ರೀಮಿಯರ್ ಲೀಗ್ ನ 13ನೇ ಆವೃತ್ತಿಯ ಟಿ20 ಟೂರ್ನಿಗೆ ಚೀನಾ ಮೂಲದ ಮೊಬೈಲ್ ಕಂಪನಿ ವಿವೊ ಪ್ರಾಯೋಜಕತ್ವ ಇರುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ.

ಚೀನಾ ಉತ್ಪಾದಿತ ವಸ್ತುಗಳನ್ನು ಬ್ಯಾನ್ ಮಾಡುತ್ತಿರುವ ಸಂದರ್ಭದಲ್ಲಿ ಐಪಿಎಲ್ ಗೆ ಪ್ರಾಯೋಕತ್ವ ಹೊಂದಿರುವ ವಿವೊವನ್ನು ಬಿಡಬೇಕು ಎಂಬ ಆಗ್ರಹ ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

ಎರಡು ದಿನಗಳ ಹಿಂದಷ್ಟೇ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿಯುತ್ತಿರುವುದಾಗಿ ವಿವೊ ಕಂಪನಿಯೂ ಹೇಳಿತ್ತು.