Thursday, September 17, 2026

BDA Apartments

ಬಿಸಿಸಿಐ ಅಧ್ಯಕ್ಷರನ್ನಾಗಿ ಸೌರವ್‌ ಗಂಗೂಲಿ ಮುಂದುವರಿಕೆಗೆ ಆಕ್ಷೇಪ… BDA JK_Adv BDA Adv
Home Front Page ಬಿಸಿಸಿಐ ಅಧ್ಯಕ್ಷರನ್ನಾಗಿ ಸೌರವ್‌ ಗಂಗೂಲಿ ಮುಂದುವರಿಕೆಗೆ ಆಕ್ಷೇಪ….

ಬಿಸಿಸಿಐ ಅಧ್ಯಕ್ಷರನ್ನಾಗಿ ಸೌರವ್‌ ಗಂಗೂಲಿ ಮುಂದುವರಿಕೆಗೆ ಆಕ್ಷೇಪ….

ನವದೆಹಲಿ,ಆ,6,2020(www.justkannada.in): ಬಿಸಿಸಿಐ ಅಧ್ಯಕ್ಷರನ್ನಾಗಿ ಸೌರವ್‌ ಗಂಗೂಲಿ ಅವರ ಮುಂದುವರಿಕೆಗೆ ಜಾರ್ಖಂಡ್‌ ಕ್ರಿಕೆಟ್‌ ಮಂಡಳಿಯ ಆಜೀವ ಸದಸ್ಯ ನರೇಶ್‌ ಮಲ್ಕಾನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಬಿಸಿಸಿಐ ಅಧ್ಯಕ್ಷರನ್ನಾಗಿ ಸೌರವ್‌ ಗಂಗೂಲಿ ಅವರನ್ನು ಮತ್ತು ಕಾರ್ಯದರ್ಶಿಯನ್ನಾಗಿ ಜಯ್‌ ಶಾ ಅವರನ್ನು 2025ರವರೆಗೆ ಮುಂದುವರಿಸಿ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆ. ಇದರ ವಿಚಾರಣೆ ಆ. 17ರಂದು ನಡೆಯಲಿದೆ.

ಆದರೆ ಇದಕ್ಕೆ ಅವಕಾಶ ಕೊಡಬಾರದು ಎಂದು ಜಾರ್ಖಂಡ್‌ ಕ್ರಿಕೆಟ್‌ ಮಂಡಳಿಯ ಆಜೀವ ಸದಸ್ಯ ನರೇಶ್‌ ಮಲ್ಕಾನಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.sourav-ganguly-bcci-president

ಹೊಸ ಸಂವಿಧಾನವನ್ನು ಬದಲಿಸಿ ಗಂಗೂಲಿ ಮತ್ತು ಶಾಗೆ ಅವಕಾಶ ನೀಡುವುದು, ಲೋಧಾ ಸಮಿತಿಯ ಆಶಯವನ್ನೇ ಹಾಳು ಮಾಡುತ್ತದೆ. ಲೋಧಾ ಸಮಿತಿಯ ಶಿಫಾರಸನ್ನು ಸಡಿಲುಗೊಳಿಸುತ್ತಿರುವುದು ದುರುದ್ದೇಶಪೂರಿತ ಎಂದು ಮಲ್ಕಾನಿ  ತಿಳಿಸಿದ್ದಾರೆ.

Key words: Sourav Ganguly  BCCI president