Sunday, October 4, 2026

BDA Apartments

Home Cinema ಬಡ ಮುಸ್ಲಿಂ ಕುಟುಂಬಕ್ಕೆ ನೆರವಾದ ಕಿಚ್ಚ ಚಾರಿಟೆಬಲ್ ಟ್ರಸ್ಟ್

ಬಡ ಮುಸ್ಲಿಂ ಕುಟುಂಬಕ್ಕೆ ನೆರವಾದ ಕಿಚ್ಚ ಚಾರಿಟೆಬಲ್ ಟ್ರಸ್ಟ್

ಬೆಂಗಳೂರು, ಜುಲೈ 04, 2020 (www.justkannada.in): ಲಾಕ್ ಡೌನ್ ನಿಂದಾಗಿ ಆಟೋಚಾಲಕನಾದ ರಿಯಾಜ್ ತನ್ನ ತಂಗಿ ಮದುವೆಗೆ ಹಣ ಹೊಂದಿಸಲು ಕಷ್ಟಪಡುತ್ತಿದ್ದರು. ಇವರ ನೆರವಿಗೆ ಕಿಚ್ಚ ಸುದೀಪ್ ಬಂದಿದ್ದಾರೆ.

ಹೌದು. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮುಸ್ಲಿಂ ಕುಟುಂಬದ ಮದುವೆಯೊಂದಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ.

ಬಡ ಕುಟುಂಬದ ರಿಯಾಜ್ ಅವರಿಗೆ ನಟ ಸುದೀಪ್ ಸೂಚನೆ ಮೇರೆಗೆ ಟ್ರಸ್ಟ್ ನ ಸದಸ್ಯರು ಸಹಾಯ ಮಾಡಿದ್ದಾರೆ. 20 ಸಾವಿರ ರೂ.ಗಳ ಚೆಕ್ ಕೊಟ್ಟಿದ್ದಾರೆ.