Wednesday, August 5, 2026

BDA Apartments

Home Front Page ತಮ್ಮ ವಿರುದ್ದ ಹೆಚ್. ವಿಶ್ವನಾಥ್ ಅಸಮಾಧಾನ ಕುರಿತು ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿದ್ದು ಹೀಗೆ…?

ತಮ್ಮ ವಿರುದ್ದ ಹೆಚ್. ವಿಶ್ವನಾಥ್ ಅಸಮಾಧಾನ ಕುರಿತು ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿದ್ದು ಹೀಗೆ…?

ಮಡಿಕೇರಿ,ಜೂ,1,2019(www.justkananda.in):  ಕೆ.ಆರ್ ನಗರ ಪುರಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರ ಮತ್ತು ಜೆಡಿಎಸ್ ಸೋಲು ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ತಮ್ಮ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದಕ್ಕೆ ಸಚಿವ ಸಾ.ರಾ ಮಹೇಶ್ ಪ್ರತಿಕ್ರಿಯಿಸಿದ್ದಾರೆ.

ಹೆಚ್.ವಿಶ್ವನಾಥ್ ಅವರಿಗೆ ರಾಜಕೀಯದಲ್ಲಿ 40 ವರ್ಷ ಅನುಭವವಿದೆ.  ನಮ್ಮಂತವರಿಗೆ  ಸಲಹೆ ಸೂಚನೆ ನೀಡುವ ಸಂಪೂರ್ಣ ಹಕ್ಕು ಅವರಿಗಿದೆ ಎಂದು ಸಚಿವ ಸಾ.ರಾ ಮಹೇಶ್ ತಿಳಿಸಿದ್ದಾರೆ.

ಹೆಚ್.ವಿಶ್ವನಾಥ್ ಬೇಸರದ ಬಗ್ಗೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಸಾ.ರಾ ಮಹೇಶ್, ಹೆಚ್.ವಿಶ್ವನಾಥ್ ಹಿರಿಯರು.  ನನಗೆ 20 ವರ್ಷ ರಾಜಕೀಯದಲ್ಲಿ ಅನುಭವವಿದ್ದರೇ ಅವರಿಗೆ 40 ವರ್ಷದ ರಾಜಕೀಯ ಅನುಭವವಿದೆ. ಹೆಚ್.ವಿಶ್ವನಾಥ್ ಅನುಭವದ ಮೇಲೆ ಕೆಲ ಸಲಹೆಗಳನ್ನ ನೀಡಿದ್ದಾರೆ. ಅವರ ಸಲಹೆ ಸೂಚನೆಯಲ್ಲಿ ಸತ್ಯಾಂಶವಿದ್ದರೇ ಸರಿಪಡಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಕೆ.ಆರ್ ನಗರ ಪುರಸಭೆ ಚುನಾವಣೆಗೆ ತಮ್ಮ ಸಮುದಾಯದ ಒಬ್ಬರಿಗೂ ಟಿಕೆಟ್ ನೀಡದಕ್ಕೆ ಸಚಿವ ಸಾ.ರಾ ಮಹೇಶ್ ವಿರುದ್ದ ಹೆಚ್.ವಿಶ್ವನಾಥ್ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ದ್ವೇಷದ ರಾಜಕಾರಣ ಮಾಡಬೇಡಿ ಎಂದು ಸಲಹೆ ನೀಡಿದ್ದರು.

Key words:  Minister SaRa Mahesh reacts to H.Vishwanath’s displeasure

#madikeri saramahesh #HVishwanath’