ಸಿಎಂ ಗೃಹಕಚೇರಿ ಕೃಷ್ಣಾದ ನಾಲ್ವರು ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆ…

ಬೆಂಗಳೂರು,ಜೂ,25,2020(www.justkannada.in): ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಮಹಾಮಾರಿ ಕೊರೋನಾ ಪೊಲೀಸರು, ವೈದ್ಯರು, ಜನಪ್ರತಿನಿಧಿಗಳು, ಜನಸಾಮಾನ್ಯರು, ಬಡವರು ಯಾರನ್ನೂ ಬಿಡದೇ ಕಾಡುತ್ತಿದೆ. ಈ ಮಧ್ಯೆ ರಾಜ್ಯದಲ್ಲೂ ಮಾರಣಾಂತಿಕ ಕೊರೋನಾ  ಅಬ್ಬರಿಸುತ್ತಿದ್ದು ಸಿಎಂ ಗೃಹಕಚೇರಿ ಕೃಷ್ಣಾದ ನಾಲ್ವರು ಸಿಬ್ಬಂದಿಗೆ ಸೋಂಕಿರುವುದು ಪತ್ತೆಯಾಗಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್ಸ್ ಟೇಬಲ್, ಎಆರ್ ಎಸ್ಐ, ಅಗ್ನಿಶಾಮಕ ಸಿಬ್ಬಂದಿ, ಮತ್ತು ಎಲೆಕ್ಟ್ರಿಷಿಯನ್ ಗೆ ಕೊರೋನಾ ಸೋಂಕು ತಗುಲಿದೆ. ಸೋಂಕಿತ ನಾಲ್ವರು  ಕಳೆದ 25 ದಿನಗಳಿಂದ ಕ್ವಾರಂಟೈನ್ ರಜೆಯಲ್ಲಿದ್ದರು.cm-office-krishna-four-staff-corona-positive

ಈ ನಡುವೆ ಇಂದು ನಾಲ್ವರಿಗೆ ಕೊರೋನಾ ಸೋಂಕಿರುವುದು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಒಬ್ಬರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಕೃಷ್ಣಾದಲ್ಲಿನ ಮಹಿಳಾ ಕಾನ್ಸ್ ಟೇಬಲ್ ವೊಬ್ಬರ ಪತಿಗೆ ಕೊರೋನಾ ಸೋಂಕಿದ್ದ ಹಿನ್ನೆಲೆ  ಸಿಎಂ ಕಾರ್ಯಕ್ರಮಗಳನ್ನ ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿತ್ತು.

Key words: CM –office-krishna-: Four – staff –corona positive