Tuesday, September 15, 2026

BDA Apartments

ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಗೆದ್ದ ವಿಂಡೀಸ್, ದಾಖಲೆ ಬರೆದ ಗೇಲ್ BDA JK_Adv...
Home Front Page ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಗೆದ್ದ ವಿಂಡೀಸ್, ದಾಖಲೆ ಬರೆದ ಗೇಲ್

ವಿಶ್ವಕಪ್ ಕ್ರಿಕೆಟ್: ಪಾಕ್ ವಿರುದ್ಧ ಗೆದ್ದ ವಿಂಡೀಸ್, ದಾಖಲೆ ಬರೆದ ಗೇಲ್

ಲಂಡನ್, ಜೂನ್ 01, 2019 (www.justkannada.in): ಪಾಕಿಸ್ತಾನದ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ 7 ವಿಕೆಟ್ ಅಂತರದ ಭರ್ಜರಿ ಜಯ ಗಳಿಸಿದೆ.

ಬ್ಯಾಟಿಂಗ್ ನಲ್ಲಿ ಮಿಂಚಿದ ಕ್ರಿಸ್ ಗೇಲ್ 33 ಎಸೆತಗಳಲ್ಲಿ 50 ರನ್ ಸಿಡಿಸಿ ವಿಂಡೀಸ್ ಗೆಲುವನ್ನು ಸುಲಭವಾಗಿಸಿದ್ದಾರೆ. ಕ್ರಿಸ್ ಗೇಲ್ 3 ಸಿಕ್ಸರ್, 6 ಬೌಂಡರಿ ಸಹಿತ 50 ರನ್ ಗಳಿಸಿ, ಸತತ 6ನೇ ಅರ್ಧ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

ಈ ವಿಶ್ವಕಪ್ ಪಂದ್ಯದಲ್ಲಿ ಸಿಕ್ಸರ್ ಗಳ ಸಂಖ್ಯೆಯನ್ನು 40 ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ವಿಶ್ವಕಪ್ ನಲ್ಲಿ ಆಡಿದ 23 ಪಂದ್ಯಗಳಲ್ಲಿ 37 ಸಿಕ್ಸರ್ ಎಬಿಡಿ ವಿಲಿಯರ್ಸ್ ದಾಖಲೆಯನ್ನು ಕ್ರಿಸ್ ಗೇಲ್ ಹಿಂದಿಕ್ಕಿದ್ದಾರೆ.

ಕ್ರಿಸ್ ಗೇಲ್ 27ನೇ ವಿಶ್ವಕಪ್ ಪಂದ್ಯದಲ್ಲಿ 40 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ರಿಕಿ ಪಾಂಟಿಂಗ್ 31, ಬ್ರೆಂಡನ್ ಮೆಕಲಮ್ 29, ಹರ್ಷಲ್ ಗಿಬ್ಸ್ 28, ಸಚಿನ್ ತೆಂಡೂಲ್ಕರ್ 27 ಸಿಕ್ಸರ್ ಸಿಡಿಸಿದ್ದಾರೆ.