Saturday, September 12, 2026

BDA Apartments

ಮೈಸೂರಿನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ: ಕಂಟೈನ್ ಮೇಂಟ್ ಝೋನ್ ಘೋ...
Home Front Page ಮೈಸೂರಿನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ:  ಕಂಟೈನ್ ಮೇಂಟ್ ಝೋನ್ ಘೋಷಣೆ…

ಮೈಸೂರಿನಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ:  ಕಂಟೈನ್ ಮೇಂಟ್ ಝೋನ್ ಘೋಷಣೆ…

ಮೈಸೂರು,ಜೂ,23,2020(www.justkannada.in): ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ ಮೈಸೂರಿನಲ್ಲಿ ಕಂಟೇನ್ ಮೆಂಟ್ ಝೋನ್ ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ  ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ನಗರದಲ್ಲಿ ಕಂಡು ಬಂದಿದೆ.

ರಾಜಸ್ಥಾನ ದಿಂದ ಮೈಸೂರಿಗೆ ಆಗಮಿಸಿದ್ದ  32 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಪತ್ತೆಯಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಮೈಸೂರು ಹೃದಯ ಭಾಗದಲ್ಲಿರುವ ಶಿವರಾಂಪೇಟೆ  3 ನೇ ಕ್ರಾಸ್ ಸೀಲ್ ಡೌನ್ ಮಾಡಲು ಮೈಸೂರು ಪಾಲಿಕೆ ಸಿಬ್ಬಂದಿ ಮುಂದಾಗಿದ್ದಾರೆ. ಅಲ್ಲಿನ ಸುತ್ತಮುತ್ತಲಿನ ಅಂಗಡಿಗಳು ಬಂದ್ ಮಾಡಿಸಲಾಗುತ್ತಿದೆ.another-corona-positive-case-mysore

ಇನ್ನು ಸೋಂಕಿತ ವ್ಯಕ್ತಿ ಫೆಸಿಲಿಟಿ ಕ್ವಾರಂಟೈನಲ್ಲಿ ಇದ್ದರು. ಸೋಂಕಿತ ವ್ಯಕ್ತಿ ಫೆಸಿಲಿಟಿ ಕ್ವಾರಂಟೈನ್ ಲಿ ಇದ್ದರೂ ಆತನ ಕುಟುಂಬಸ್ಥರ ಜೊತೆ ಸಂಪರ್ಕ ಇದ್ದಾರೆಂದು  ಆ ಪ್ರದೇಶವನ್ನ ಕಂಟೈನ್ಮೆಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

Key words: Another- corona positive -case – Mysore.