ಬೆಂಗಳೂರು,ಜೂ,22,2020(www.justkannada.in): ಕೊರೋನಾ ಸೋಂಕು ತಡೆಗಟ್ಟಲು ಹೇರಲಾಗಿದ್ದ ಲಾಕ್ ಡೌನ್ ಸಡಿಲಗೊಳಿಸಿದ ಮೇಲೆ ಸೋಂಕು ಹೆಚ್ಚಾಗಿದೆ. ಜನರು ಲಾಕ್ ಡೌನ್ ಸಡಿಲಿಕೆ ದುರುಪಯೋಗಪಡಿಸಿಕೊಂಡಿದ್ದು ಕಾರಣ ಎಂದು ಅಧಿಕಾರಿಗಳ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕೊರೋನಾ ವೈರಸ್ ಹೆಚ್ಚಳವಾಗುತ್ತಿರುವ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಲಾಕ್ ಡೌನ್ ಸಡಿಲಿಕೆಯನ್ನ ಅನ್ನ ಜನರು ದುರುಪಯೋಗಪಡಿಸಿಕೊಂಡರು. ಹೀಗಾಗಿ ಲಾಕ್ ಡೌನ್ ಸಡಿಲಿಕೆ ಬಳಿಕ ಸೋಂಕು ಹೆಚ್ಚಾಗಿದೆ. ಹೊರರಾಜ್ಯಗಳಿಂದ ಬಂದವರಿಂದ ಕೊರೋನಾ ವೈರಸ್ ಹೆಚ್ಚಾಗಿದೆ. ಅಲ್ಲದೇ ದಿನೇ ದಿನೇ ಕೊರೋನಾ ವೈರಸ್ ಹೆಚ್ಚುತ್ತಿದ್ದು ಇದು ಬಹಳ ನೋವು, ಆಘಾತಕಾರಿ ವಿಚಾರ ಎಂದು ಹೇಳಿದ್ದಾರೆ.
Key words: Lock Down –corona virus-CM BS Yeddyurappa- Meeting.






